ಕರ್ನಾಟಕ

karnataka

ETV Bharat / bharat

ಕೋವಿಡ್​​ನಿಂದ ಸಾವಿರಾರು ಎಚ್‍ಐವಿ ರೋಗಿಗಳು ಸಾಯಬಹುದು: WHO ಎಚ್ಚರಿಕೆ - ವಿಶ್ವ ಆರೋಗ್ಯ ಸಂಸ್ಥೆ

ಎಚ್‍ಐವಿ ಹರಡುವಿಕೆ ಹಾಗೂ ಪೀಡಿತರ ಚಿಕಿತ್ಸೆಯಲ್ಲಿ ಏರುಪೇರಾಗದಂತೆ ತಡೆಯಲು ತುರ್ತುಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲವಾದರೆ, ಕೋವಿಡ್ 19ರ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಹೆಚ್ಚು ಎಚ್‍ಐವಿ ರೋಗಿಗಳು ಸೂಕ್ತ ಚಿಕಿತ್ಸೆ ದೊರೆಯದೆ ಸಾವಿಗೀಡಾಗುವ ಸಾಧ್ಯತೆ ಇದೆ. ಎಚ್‍ಐವಿ ಹರಡುವಿಕೆ ಹೆಚ್ಚಳವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಎಚ್ಚರಿಸಿದೆ.

WHO
ವಿಶ್ವ ಆರೋಗ್ಯ ಸಂಸ್ಥೆ

By

Published : May 14, 2020, 7:34 PM IST

Updated : May 14, 2020, 8:30 PM IST

ಹೈದರಾಬಾದ್:ಕೋವಿಡ್ 19ರ ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಆರೋಗ್ಯ ಸೇವೆಯಲ್ಲಿ ಉಂಟಾಗಿರುವ ಏರುಪೇರು ಹಾಗೂ ಔಷಧಗಳ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ, ಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಆ್ಯಂಟಿ ವೈರಲ್ ಥೆರಪಿಯಲ್ಲಿ ವ್ಯತ್ಯಯ ಉಂಟಾದರೆ, ಎಚ್‍ಐವಿ/ಏಡ್ಸ್​ನಿಂದ ಹಾಗೂ ಸಂಬಂಧಿಸಿದ ತೊಂದರೆಯಿಂದ 5 ಲಕ್ಷಕ್ಕೂ ಅಧಿಕ ಮಂದಿ ಹೆಚ್ಚುವರಿಯಾಗಿ ಸಾವನ್ನಪ್ಪಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್‍ಒ) ಹಾಗೂ ಯುಎನ್ ಏಡ್ಸ್ ಸಂಸ್ಥೆಗಳು ರಚಿಸಿರುವ ಒಂದು ವೈಜ್ಞಾನಿಕ ಮಾದರಿ ಅಧ್ಯಯನ ತಂಡ ತಿಳಿಸಿದೆ.

"ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಆಫ್ರಿಕಾ ಖಂಡದಲ್ಲಿ ಎಚ್‍ಐವಿ - ಏಡ್ಸ್ ಅನಾರೋಗ್ಯದ ಕಾರಣದಿಂದಾಗಿ, ಸುಮಾರು ಅರ್ಧ ಮಿಲಿಯನ್ (5 ಲಕ್ಷ)ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುವುದು ನಾವು ಇತಿಹಾಸದತ್ತ ಜಾರುವುದು," ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಟೆಡ್ರೋಸ್ ಅದನೋಮ್ ಘೆಬ್ರೆಸಸ್ ಎಚ್ಚರಿಸಿದ್ದಾರೆ. "ಎಲ್ಲ ದೇಶಗಳು ಆರೋಗ್ಯ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ತಡೆಯಲು, ನಾವಿದನ್ನು ಎಚ್ಚರಿಕೆಯ ಕರೆಗಂಟೆಯಾಗಿ ನೀಡುತ್ತಿದ್ದೇವೆ.

ಎಲ್ಲ ದೇಶಗಳು ತಮ್ಮ ಬಹುಮುಖ್ಯ ಆರೋಗ್ಯ ಸೇವೆಗಳನ್ನು ಕಾಪಾಡಬೇಕಿದೆ. ಕೆಲವು ದೇಶಗಳು ಎಚ್‍ಐವಿ ಹಿನ್ನೆಲೆಯಲ್ಲಿ ಬಹುಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಉದಾಹರಣೆಗೆ, ಸ್ವಯಂ ಪರೀಕ್ಷಾ ಕಿಟ್‍ಗಳು ಸೇರಿದಂತೆ ಜನರಿಗೆ ದೊಡ್ಡ ಪ್ರಮಾಣದಲ್ಲಿ ಔಷಧ ಖರೀದಿಸಲು ಹಾಗೂ ಇತರ ಅವಶ್ಯಕ ಸಾಮಾಗ್ರಿಗಳು ಲಭ್ಯವಾಗುವಂತೆ ಮಾಡುವುದು. ಈ ಸಾಮಗ್ರಿಗಳು ದೊಡ್ಡ ಪ್ರಮಾಣದಲ್ಲಿ ಒಂದು ನಿಗದಿತ ಸ್ಥಳದಲ್ಲಿ ದೊರೆಯುವಂತೆ ಮಾಡುವ ಮೂಲಕ ಆರೋಗ್ಯ ಸೇವಾದಾತರ ಸಂಸ್ಥೆಗಳ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲಿನ ಒತ್ತಡವನ್ನು ಕುಗ್ಗಿಸಬಹುದು. ಇದರ ಜತೆಗೆ ಅಗತ್ಯವಿರುವ ದೇಶಗಳಿಗೆ, ನಾವು ಜಾಗತಿಕವಾಗಿ ಎಚ್‍ಐವಿ/ ಏಡ್ಸ್ ಔಷಧಗಳ ಪೂರೈಕೆ ನಿರಂತರವಾಗಿರಲು ಕ್ರಮಕೈಗೊಳ್ಳಬೇಕಿದೆ," ಎಂದು ಅವರು ತಿಳಿಸುತ್ತಾರೆ.

"ಸಹರಾನ್ ಆಫ್ರಿಕಾ ದೇಶಗಳಲ್ಲಿ 25.7 ಮಿಲಿಯನ್ ಜನರು ಎಚ್‍ಐವಿ ಪೀಡಿತರಾಗಿದ್ದು, 2018ರ ಹೊತ್ತಿಗೆ ಈ ಪೈಕಿ 16.4 ಮಿಲಿಯನ್ ರೋಗಿಗಳು (64%) ಆ್ಯಂಟಿರೆಟ್ರೋವೈರಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ರೋಗಿಗಳು ಈಗ ಕೋವಿಡ್ 19 ಬಿಕ್ಕಟ್ಟಿನ ಕಾರಣಕ್ಕಾಗಿ, ತಮ್ಮ ಚಿಕಿತ್ಸೆಯಲ್ಲಿ ಅಡಚಣೆ ಹಾಗೂ ವ್ಯತ್ಯಯದ ಭೀತಿಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಎಚ್‍ಐವಿ ಸಂಬಂಧಿತ ಸೇವೆಗಳು ಕೊರೊನಾ ಕಾರಣಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ ಅಥವಾ, ಔಷಧ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಔಷಧಗಳ ಕೊರತೆ ಉಂಟಾಗಿದೆ ಜೊತೆಗೆ ಎಚ್‍ಐವಿ ಚಿಕಿತ್ಸಾ ಕೇಂದ್ರಗಳು ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ತುಂಬಲ್ಪಟ್ಟಿವೆ," ಎನ್ನುತ್ತಾರೆ ಟೆಡ್ರೋಸ್.

"ಆರೋಗ್ಯ ಸೇವೆಯಲ್ಲಿನ ಈ ವ್ಯತ್ಯಯ, ತಾಯಿಯಿಂದ ಮಕ್ಕಳಿಗೆ ಎಚ್‍ಐವಿ ಹರಡದಂತೆ ಮಾಡುವಲ್ಲಿ ಈವರೆಗೆ ಮಾಡಲಾಗಿರುವ ಸಾಧನೆಗಳನ್ನು ಮಣ್ಣುಪಾಲು ಮಾಡಬಹುದು," ಎಂದು ಅವರು ಎಚ್ಚರಿಸಿದ್ದಾರೆ. 2010ರಿಂದೀಚೆಗೆ ಮಕ್ಕಳಲ್ಲಿನ ಎಚ್‍ಐವಿ ಹರಡುವಿಕೆ ಪ್ರಮಾಣ ಸಹರಾನ್ ಆಫ್ರಿಕಾ ದೇಶಗಳಲ್ಲಿ ಶೇ.43 ರಷ್ಟು ಕುಗ್ಗಿದೆ. 2010ರಲ್ಲಿ ಈ ಹರಡುವಿಕೆ ಪ್ರಮಾಣ 2,50,000 ರಷ್ಟಿದ್ದರೆ, ಅದು 2018ರ ವೇಳೆಗೆ 1,40,000ಕ್ಕೆ ಇಳಿದಿದೆ. ಇದಕ್ಕೆ ಕಾರಣ ಈ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ತಾಯಿ-ಮಕ್ಕಳನ್ನು ಎಚ್‍ಐವಿ ಆರೋಗ್ಯ ಸೇವೆಗೆ ಒಳಪಡಿಸಿದ್ದು. ಕೋವಿಡ್ 19ರ ಕಾರಣಕ್ಕಾಗಿ ಆರು ತಿಂಗಳುಗಳ ಕಾಲ ಈ ಎಚ್‍ಐವಿ ಆರೋಗ್ಯ ಸೇವೆಯಲ್ಲಿ ಕಡಿತ ಮಾಡಿದರೆ, ನವಜಾತ ಶಿಶುಗಳಲ್ಲಿ ಎಚ್‍ಐವಿ ಸೋಂಕು ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಬಹುದು. ಒಂದು ಅಂದಾಜಿನ ಪ್ರಕಾರ, ಮೊಝಾಂಬಿಕ್‍ನಲ್ಲಿ ಇದು ಶೇ.37, ಜಿಂಬಾಬ್ವೆ ಹಾಗೂ ಮಾಯಾವೈನಲ್ಲಿ ಶೇ.78, ಹಾಗೂ ಉಗಾಂಡದಲ್ಲಿ ಇದು ಶೇ.104ರಷ್ಟು ಹೆಚ್ಚಳವಾಗಲಿದೆ ಎಂಬ ಕಳವಳವನ್ನ ವಿಶ್ವ ಆರೋಗ್ಯ ಸಂಸ್ಥೆ ವ್ಯಕ್ತಪಡಿಸಿದೆ.

Last Updated : May 14, 2020, 8:30 PM IST

ABOUT THE AUTHOR

...view details