ಹೈದರಾಬಾದ್: ದೇಶದಲ್ಲಿ ಕೊರೊನಾ ಹರಡುವಿಕೆ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇದೀಗ ಒಟ್ಟು ಸೋಂಕಿತ ಸಂಖ್ಯೆ 6 ಲಕ್ಷ ಗಡಿ ದಾಟಿದೆ. ಜತೆಗೆ ಸಾವಿನ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.ಈ ಮೂಲಕ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
ದೇಶದಲ್ಲಿ 2,20,114 ಲಕ್ಷಕ್ಕೂ ಅಧಿಕ ಆ್ಯಕ್ಟಿವ್ ಕೇಸ್ಗಳಿದ್ದು, 3,47,978 ಜನರು ಕೋವಿಡ್ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆ ಮಹಾಮಾರಿಯಿಂದ 17,400 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲೇ 500 ಜನರು ಸಾವನ್ನಪ್ಪಿದ್ದು, ಇಂದು 18,522 ಕೇಸ್ ಕಾಣಿಸಿಕೊಂಡಿವೆ.
ಶೇ.90ರಷ್ಟು ಕೋವಿಡ್ ಕೇಸ್ ಕೇವಲ 10 ರಾಜ್ಯಗಳಿಂದ ಕಂಡು ಬಂದಿದ್ದು, ಅವುಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ನವದೆಹಲಿ, ಗುಜರಾತ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ ಹಾಗೂ ಕರ್ನಾಟಕ ಸೇರಿಕೊಂಡಿವೆ.
ರಾಜ್ಯವಾರು ಕೋವಿಡ್ ಪ್ರಕರಣ
ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು,ಅತಿ ಹೆಚ್ಚು ಜನರು ಗುಣಮುಖರಾಗುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿಂದು ಒಟ್ಟು 2442 ಹೊಸ ಪ್ರಕರಣ ಪತ್ತೆಯಾಗಿದ್ದು, 61 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತ ಸಂಖ್ಯೆ 89,802 ಆಗಿದ್ದು, 59,992 ಜನರು ಗುಣಮುಖರಾಗಿದ್ದಾರೆ. ಸದ್ಯ 27,007 ಸಕ್ರಿಯ ಪ್ರಕರಣಗಳಿವೆ.
ಮಧ್ಯಪ್ರದೇಶ:ಮಧ್ಯಪ್ರದೇಶ ಮುಖ್ಯಮಂತ್ರಿ ಕಿಲ್ ಕೊರೊನಾ ಕ್ಯಾಂಪೆನ್ ಆರಂಭಿಸಿದ್ದು, ಪ್ರತಿದಿನ 11,458 ತಂಡ ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಿದೆ. ಮುಂದಿನ 15 ದಿನಗಳ ಕಾಲ ಈ ಕ್ಯಾಂಪೆನ್ ನಡೆಯಲಿದೆ. ಸದ್ಯ ಮಧ್ಯಪ್ರದೇಶದಲ್ಲಿ 9344 ಸೋಂಕಿತ ಪ್ರಕರಣಗಳಿದ್ದು, ಇಂದು ಕೂಡ 268 ಹೊಸ ಪ್ರಕರಣ ಕಾಣಿಸಿಕೊಂಡಿವೆ.
ಗುಜರಾತ್:ಗುಜರಾತ್ನಲ್ಲಿಂದು 675 ಹೊಸ ಕೇಸ್ ಕಾಣಿಸಿಕೊಂಡಿದ್ದು, 21 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 33318 ಆಗಿದ್ದು, 1869 ಜನರು ಸಾವನ್ನಪ್ಪಿದ್ದಾರೆ.