ನವದೆಹಲಿ:ದೇಶದಲ್ಲಿ ಮಹಾಮಾರಿ ಕೋವಿಡ್-19 ತಲ್ಲಣ ಹೆಚ್ಚಿಸುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ನೊವೆಲ್ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 14 ಸಾವಿರದ 378ಕ್ಕೆ ಏರಿಕೆಯಾಗಿದ್ದರೆ. ವೈರಸ್ ತಗುಲಿ ಮೃತಪಟ್ಟವರ ಸಂಖ್ಯೆ 480ಕ್ಕೆ ಬಂದಿದೆ. 11 ಸಾವಿರದ 906 ಕೇಸ್‌ಗಳು ಆ್ಯಕ್ಟೀವ್ ಆಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ 14,378ಕ್ಕೆ ಏರಿದ ಸೋಂಕಿತರ ಸಂಖ್ಯೆ : 480ರ ಗಡಿ ದಾಟಿದ ಸಾವಿನ ಸಂಖ್ಯೆ - ದೇಶದಲ್ಲಿ 14,378ಕ್ಕೆ ಏರಿದ ಕೋವಿಡ್19 ಕೇಸ್
ಕಳೆದ 24 ಗಂಟೆಗಳಲ್ಲಿ ನೊವೆಲ್ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 14 ಸಾವಿರದ 378ಕ್ಕೆ ಏರಿಕೆಯಾಗಿದ್ದರೆ. ವೈರಸ್ ತಗುಲಿ ಮೃತಪಟ್ಟವರ ಸಂಖ್ಯೆ 480ಕ್ಕೆ ಬಂದಿದೆ. 11 ಸಾವಿರದ 906 ಕೇಸ್‌ಗಳು ಆ್ಯಕ್ಟೀವ್ ಆಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
480 ಮಂದಿ ಮೃತರ ಪೈಕಿ 201 ಸಾವು ಮಹಾರಾಷ್ಟ್ರದಲ್ಲೇ ಸಂಭವಿಸಿ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿರುವ ಮದ್ಯಪ್ರದೇಶದಲ್ಲಿ ಈವರೆಗೆ 69 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿತರಲ್ಲಿ ಒಟ್ಟು 1 ಸಾವಿರದ 991 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿದೆ. ನೆರೆಯ ಈ ರಾಜ್ಯದಲ್ಲಿ 3 ಸಾವಿರದ 323 ಸೋಂಕಿತರ ಪ್ರಕರಣಗಳು ದೃಢಪಟ್ಟಿವೆ. ದೆಹಲಿ (1,707) ತಮಿಳುನಾಡು (1,323) ಹಾಗೂ ಮಧ್ಯಪ್ರದೇಶದಲ್ಲಿ 1,310 ಪ್ರಕರಣಗಳು ದಾಖಲಾಗಿವೆ.