ನವದೆಹಲಿ:ಕೋಮು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಅವನನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಖಲೀದ್ನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಅಕ್ಟೋಬರ್ 1ರಂದು ಬಂಧಿಸಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಳಪಡಿಸಿದೆ. ಅಕ್ಟೋಬರ್ 4ರಂದು ಅವರ ಪೊಲೀಸ್ ಕಸ್ಟಡಿ ಕೊನೆಗೊಂಡಿತ್ತು. ಈ ಬಳಿಕ ಆತನನ್ನು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಖಲೀದ್ ವಕೀಲರಾದ ಸನ್ಯಾ ಕುಮಾರ್ ಮತ್ತು ರಕ್ಷಾಂಡಾ ದೆಖಾ ಅವರು ತಮ್ಮ ಕಕ್ಷಿದಾರರಿಗೆ ಭದ್ರತೆ, ಕನ್ನಡಕ ಧರಿಸಲು ಅನುಮತಿ, ಪುಸ್ತಕಗಳ ಲಭ್ಯತೆ ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು, ತಿಹಾರ್ ನ್ಯಾಯಾಲಯದ ಕಾಂಪ್ಲೆಕ್ಸ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೇವ್ ಸರೋಹಾ, ಭದ್ರತೆಯನ್ನು ನೀಡಿ ಆದೇಶಿಸಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿಯ ವಿರುದ್ಧ ಪ್ರತಿಭಟಿಸುವ ಜನರನ್ನು ಪ್ರಚೋದಿಸುವ ಮೂಲಕ ಕೋಮು ಅಶಾಂತಿ ಉಂಟುಮಾಡುವ ಕ್ರಿಮಿನಲ್ ಪಿತೂರಿಯನ್ನು ನಡೆಸಿದ ಆರೋಪ ಖಲೀದ್ ಮೇಲಿದೆ. ಇನ್ನು ಸೆಪ್ಟೆಂಬರ್ 13ರಂದು, ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಖಲೀದ್ನ್ನು ಬಂಧಿಸಲಾಗಿದೆ.