ಕರ್ನಾಟಕ

karnataka

ETV Bharat / bharat

ಗೋಧ್ರಾ ರೈಲು ದುರಂತದ ಅಪರಾಧಿಗೆ ಮಧ್ಯಂತರ ಜಾಮೀನು - ಗುಜರಾತ್ ಹೈಕೋರ್ಟ್

59 ಜನರ ಸಾವಿಗೆ ಕಾರಣವಾದ 2002ರ ಗೋಧ್ರಾ ಸಬರಮತಿ ರೈಲು ಅಗ್ನಿ ದುರಂತದ ಪ್ರಮುಖ ಆರೋಪಿಗೆ ಗುಜರಾತ್ ಹೈಕೋರ್ಟ್ 10 ದಿನಗಳ ಮಧ್ಯಂತರ ಜಾಮೀನು ನೀಡಿದೆ.

Court grants bail to Sabarmati train fire convict
ಗೋಧ್ರಾ ರೈಲು ದುರಂತ

By

Published : Aug 21, 2020, 4:52 PM IST

ಗುಜರಾತ್​​: 2002ರ ಗೋಧ್ರಾ ಸಬರಮತಿ ರೈಲು ಅಗ್ನಿ ದುರಂತದ ಪ್ರಮುಖ ಆರೋಪಿ ಹಾಗೂ ಅಪರಾಧಿ ಯಾಕೂಬ್ ಪಟಾಲಿಯಾಗೆ ಗುಜರಾತ್ ಹೈಕೋರ್ಟ್ 10 ದಿನಗಳ ಮಧ್ಯಂತರ ಜಾಮೀನು ನೀಡಿದೆ.

ಕೋವಿಡ್​ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ನನ್ನ 54 ವರ್ಷದ ಪತ್ನಿ ಹಾಗೂ 24 ವರ್ಷದ ನಿರುದ್ಯೋಗಿ ಪುತ್ರನನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹೀಗಾಗಿ ನನಗೆ 30 ದಿನಗಳ ಕಾಲ ಜಾಮೀನು ನೀಡಿ ಎಂದು ಯಾಕೂಬ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ಕೋರ್ಟ್​ ಕೇವಲ 10 ದಿನಗಳ ಕಾಲ ಅವಕಾಶ ಕಲ್ಪಿಸಿ ಬೇಲ್​ ನೀಡಿದೆ.

ಯಾಕೂಬ್​ನ ಕೊರೊನಾ ಪರೀಕ್ಷಾ ವರದಿ ನೆಗೆಟಿವ್​ ಬಂದ ಬಳಿಕವೇ ಜಾಮೀನು ನೀಡಲಾಗಿದೆ ಎಂದು ಗುಜರಾತ್ ಹೈಕೋರ್ಟ್ ಉಲ್ಲೇಖಿಸಿದೆ. ಜಾಮೀನು ಅವಧಿ ಮುಗಿಯುವ ಮುನ್ನವೇ ಜೈಲು ಅಧಿಕಾರಿಗಳ ಬಳಿ ಬಂದು ಸರಂಡರ್​ ಆಗಬೇಕು ಎಂದು ಸೂಚಿಸಿದೆ.

2002ರ ಫೆಬ್ರವರಿ 27 ರಂದು ಅಯೋಧ್ಯೆಯಿಂದ ಗುಜರಾತ್​ಗೆ ಹಿಂದಿರುಗುತ್ತಿದ್ದ ಗೋಧ್ರಾ ಸಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 59 ಹಿಂದೂ ಯಾತ್ರಿಗಳು ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ಯಾಕೂಬ್ ಪಟಾಲಿಯಾಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ABOUT THE AUTHOR

...view details