ಕರ್ನಾಟಕ

karnataka

ETV Bharat / bharat

ಸುದೀರ್ಘ 7 ವರ್ಷಗಳ ನಂತರ ನಿರ್ಭಯಾ ಸ್ವಗ್ರಾಮದಲ್ಲಿ ಹೋಳಿ ಹಬ್ಬ... ದುಷ್ಟಸಂಹಾರದ ಸಂಭ್ರಮಾಚರಣೆ

ನಿರ್ಭಯಾ ಹತ್ಯಾಚಾರಿಗಳನ್ನು ಮುಂಜಾನೆ ಗಲ್ಲಿಗೇರಿಸಿದ ಆಕೆಯ ಸ್ವಗ್ರಾಮ ಮೇದ್ವಾರ ಕಲಾದಲ್ಲಿ ಹೋಳಿ ಹಬ್ಬ ಕಳೆಗಟ್ಟಿದೆ. ಅಂದಹಾಗೆ ಕಳೆದ 7 ವರ್ಷಗಳಿಂದ ಈ ಊರಿನಲ್ಲಿ ಓಕುಳಿ ಹಬ್ಬ ಆಚರಿಸಿರಲಿಲ್ಲ. ಇದೀಗ ಅದೇ ಊರಿನಲ್ಲಿ ಬಣ್ಣ ಎರಚಿಕೊಂಡು ಸಿಹಿ ಹಂಚಿರುವ ಜನರು ದುಷ್ಟ ಸಂಹಾರವನ್ನು ಸಂಭ್ರಮಿಸಿದ್ದಾರೆ.

correction - ballia: holi celebrated in nirbhaya native village for the first time after the nirbhaya case
ಸುಧೀರ್ಘ 7 ವರ್ಷಗಳ ನಂತರ ನಿರ್ಭಯ ಸ್ವಗ್ರಾಮದಲ್ಲಿ ಹೋಳಿ ಆಚರಣೆ

By

Published : Mar 20, 2020, 11:44 AM IST

Updated : Mar 20, 2020, 1:02 PM IST

ಬಾಲಿಯ(ಉತ್ತರ ಪ್ರದೇಶ): ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಿದ ನಂತರ ಆಕೆಯ ಸ್ವಗ್ರಾಮದಲ್ಲಿ ಏಳು ವರ್ಷಗಳ ನಂತರ ಹೋಳಿ ಆಚರಿಸಿ ದುಷ್ಟ ಸಂಹಾರವನ್ನು ಸಂಭ್ರಮಿಸಲಾಯಿತು.

ನಿರ್ಭಯಾ ಅಪರಾಧಿಗಳನ್ನು ಮುಂಜಾನೆ ಗಲ್ಲಿಗೇರಿಸಿದ ನಂತರ ಇಡೀ ದೇಶವೇ ಸಂಭ್ರಮಾಚರಿಸುತ್ತಿದೆ. ನಿರ್ಭಯಾ ಸ್ವಗ್ರಾಮ ಮೇದ್ವಾರ ಕಲಾದಲ್ಲಿ ಕಳೆದ ಏಳು ವರ್ಷಗಳಿಂದ ಹೋಳಿ ಆಡಿರಲಿಲ್ಲ. ಸದ್ಯ ನಿರ್ಭಯ ಪ್ರಕರಣಕ್ಕೆ ನ್ಯಾಯ ದೊರೆತಿದ್ದು ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ. ಆಚರಣೆ ವೇಳೆ ಪ್ರತಿಯೊಬ್ಬರೂ ಪರಸ್ಪರ ಸಿಹಿತಿಂಡಿಗಳನ್ನು ತಿನ್ನಿಸಿಕೊಂಡು ನಿರ್ಭಯಾ ನ್ಯಾಯವನ್ನು ಸಂಭ್ರಮಿಸಿದರು.

ಈ ಗ್ರಾಮದ ಜನರು 7 ವರ್ಷಗಳಿಂದ ಹೋಳಿ ಆಡಿರಲಿಲ್ಲ. ಆದರೆ, ಇಂದು ನ್ಯಾಯ ದೊರಕಿದ ಖುಷಿಯಲ್ಲಿ ನಾವು ಹೋಳಿ ಆಚರಿಸುತ್ತಿದ್ದೇವೆ. ನ್ಯಾಯ ಸಿಗಲು 7 ಸುಧೀರ್ಘ ವರ್ಷವೇ ಕಳೆದಿರಬಹುದು. ಆದರೆ, ಈ ದೇಶದ ಹೆಣ್ಣಿಗೆ ನ್ಯಾಯ ಸಿಗಲೇಬೇಕು ಎಂಬುದು ನಮ್ಮ ಹೋರಾಟವಾಗಿತ್ತು. ನಿರ್ಭಯಾಗೆ ನ್ಯಾಯ ಸಿಕ್ಕಿರುವುದು ಇಡೀ ದೇಶದ ಮಹಿಳೆಯರಿಗೆ ನ್ಯಾಯ ದೊರೆತಂತೆ ಎಂದು ನಿರ್ಭಯ ಅವರ ಅಜ್ಜ ಲಾಲ್​ ಜಿ ಸಿಂಗ್ ಹೇಳಿದರು.

Last Updated : Mar 20, 2020, 1:02 PM IST

ABOUT THE AUTHOR

...view details