ತಿರುವನಂತಪುರ( ಕೇರಳ):ಕೊರೊನಾ ಮಹಾಮಾರಿಯ ನಡುವೆ ಕೇರಳದಲ್ಲಿ ಸರ್ಕಾರಿ ಆಸ್ಪತ್ರಗಳಿಗೆ ಆರೋಗ್ಯ ತಪಾಸಣೆಗಾಗಿ ಭೇಟಿ ನೀಡುತ್ತಿದ್ದ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೊರರೋಗಿಗಳ ವಿಭಾಗಕ್ಕೆ ಆಗಮಿಸುತ್ತಿದ್ದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಾಣಿಸಿಕೊಂಡಿದೆ.
ಕೇರಳ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ
ಕೇರಳದಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮ ಹೊರ ರೋಗಿಗಳ ಇಲಾಖೆಗಳಿಗೆ (ಒಪಿಡಿ) ಭೇಟಿ ನೀಡುವವರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಸಾಮಾನ್ಯ ದಿನಗಳಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಹಿಂದಿನ ಆರ್ಥಿಕ ವರ್ಷದಲ್ಲಿ ಸರಾಸರಿ 4 ಲಕ್ಷ ರೋಗಿಗಳು ವಿವಿಧ ಸರ್ಕಾರಿ ವೈದ್ಯಕೀಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಆದರೆ, ಇದೀಗ ಆ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.
ಕೇರಳದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಯನ್ನ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆಗಳಿವೆ. ಜೊತೆಗೆ ಎಂಟು ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆರೋಗ್ಯ ಕೇಂದ್ರಗಳನ್ನು ಒಳಗೊಂಡಿದೆ. ಸಾಮಾನ್ಯ ದಿನಗಳಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಹಿಂದಿನ ಆರ್ಥಿಕ ವರ್ಷದಲ್ಲಿ ಸರಾಸರಿ 4 ಲಕ್ಷ ರೋಗಿಗಳು ವಿವಿಧ ಸರ್ಕಾರಿ ವೈದ್ಯಕೀಯ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಆದರೆ ಇದೀಗ ಆ ಸಂಖ್ಯೆಯಲ್ಲಿ ಶೇ. 10ಕ್ಕೆ ಕುಸಿತ ಕಂಡಿದೆ. ಪ್ರಸ್ತುತ, ಕೇರಳದಲ್ಲಿ 357 ಕೊರೊನಾ ಸೋಂಕಿತರ ಜೊತೆ 1.40 ಲಕ್ಷಕ್ಕೂ ಅಧಿಕ ಜನರನ್ನ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ರಾಜ್ಯದ ಪ್ರಧಾನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಾಹಿತಿಯ ಪ್ರಕಾರ ಸಾಮಾನ್ಯ ದಿನಗಳಲ್ಲಿ ಸುಮಾರು 5,000 ಹೊರರೋಗಿಗಳು ಭೇಟಿ ನೀಡಿದ್ದರೆ, ಆಸಂಖ್ಯೆ ಈಗ 200ಕ್ಕೆ ಇಳಿಕೆ ಕಂಡಿದೆ. ಈ ಇಳಿಕೆಗೆ ಮುಖ್ಯ ಕಾರಣ ಕೊರೊನಾ ವೈರಸ್ ಭೀತಿ ಎನ್ನಲಾಗ್ತಿದೆ.