ನವದೆಹಲಿ: ದೆಹಲಿಯ ಲೋಕ ನಾಯಕ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ 60 ಕ್ಕೂ ಹೆಚ್ಚು ಶಂಕಿತ ಕೊರೊನಾ ಸೋಂಕಿತರನ್ನು ಸ್ಥಳಾಂತರಿಸಲಾಗಿದೆ.
ಮಸೀದಿಯಲ್ಲಿದ್ದ60ಕ್ಕೂ ಹೆಚ್ಚು ಕೊರೊನಾ ಶಂಕಿತರು ಲೋಕನಾಯಕ ಆಸ್ಪತ್ರೆಗೆ ಸ್ಥಳಾಂತರ - ನವದೆಹಲಿ
ವೈದ್ಯರ ಪ್ರಕಾರ, ಶಂಕಿತರೆಲ್ಲರೂ ನಿಜಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ಇದ್ದರು ಹಾಗೆಯೇ ಕೆಲವು ಶಂಕಿತರು ಸೌದಿ ಅರೇಬಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳವರು ಎಂದು ತಿಳಿಸಿದ್ದಾರೆ.
ಲೋಕ ನಾಯಕನ ಆಸ್ಪತ್ರೆಗೆ 60 ಕ್ಕೂ ಕೆಚ್ಚು ಕೊರೊನಾ ರೋಗಿಗಳ ರವಾನೆ
ಅವರೆಲ್ಲರನ್ನು ಇಂದು ಮುಂಜಾನೆ ಡಿಟಿಸಿ ಬಸ್‌ನಲ್ಲಿ ಸ್ಥಳಾಂತರಿಸಲಾಯಿತು. ವೈದ್ಯರ ಪ್ರಕಾರ, ಶಂಕಿತರೆಲ್ಲರೂ ನಿಜಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ಇದ್ದರು. ಹಾಗೆಯೇ ಕೆಲವು ಶಂಕಿತರು ಸೌದಿ ಅರೇಬಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳವರು ಎಂದು ತಿಳಿಸಿದ್ದಾರೆ.
ಇವರೆಲ್ಲರನ್ನೂ ಮೊದಲು ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಲೋಕ ನಾಯಕ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೆಹಲಿಯಲ್ಲಿ ಒಟ್ಟು 57 ಪ್ರಕರಣಗಳು ಇದುವರೆಗೂ ವರದಿಯಾಗಿವೆ.