ಕರ್ನಾಟಕ

karnataka

ETV Bharat / bharat

4 ಸಾವಿರ ರೂ. ಇಂಜೆಕ್ಷನ್​​ 90 ಸಾವಿರಕ್ಕೆ ಮಾರಾಟ: ಸೋಂಕಿತನಿಗೆ ಇಷ್ಟು ದುಬಾರಿ ಇಂಜೆಕ್ಷನ್?

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೋಸ್ಕರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಬೇರೆಡೆಯಿಂದ ಇಂಜೆಕ್ಷನ್ ತೆಗೆದುಕೊಂಡು ಬರುವಂತೆ ತಿಳಿಸಲಾಗಿದ್ದು, ಮಾರುಕಟ್ಟೆಯಲ್ಲಿ ಅದಕ್ಕೆ ದುಬಾರಿ ಹಣ ನೀಡಿ ಖರೀದಿಸಿದ್ದಾರೆ. ಇಷ್ಟಿದ್ದೂ ಪ್ರಾಣ ಉಳಿಯಿತೇ?

corona medicine
corona medicine

By

Published : Jul 16, 2020, 7:08 PM IST

ಹೈದರಾಬಾದ್​​: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಮಾರಕ ಸೋಂಕಿನಿಂದಾಗಿ ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಆದರೀಗ ಹೈದರಾಬಾದ್​ನಲ್ಲಿ ನಡೆದಿರುವ ಘಟನೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿನ ಹಿನ್ನೆಲೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ವೈದ್ಯರು ಬೇರೆಡೆಯಿಂದ ಇಂಜೆಕ್ಷನ್​ ತೆಗೆದುಕೊಂಡು ಬರಲು ಸೂಚಿಸಿದ್ದಾರೆ. ವೈದ್ಯರು ಬರೆದುಕೊಟ್ಟಿರುವ ಇಂಜೆಕ್ಷನ್​​ ಮೂಲ ಬೆಲೆ 4ರಿಂದ 5 ಸಾವಿರ ರೂ ಆಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಬರೋಬ್ಬರಿ 90 ಸಾವಿರ ರೂ ಹಣ ನೀಡಿ ಖರೀದಿಸಿದ್ದಾರೆ.

ದುಬಾರಿ ಹಣ ನೀಡಿ ಔಷಧಿ ತೆಗೆದುಕೊಂಡು ಬಂದು ವೈದ್ಯರ ಕೈಗೆ ನೀಡಲಾಗಿದೆ. ಇಷ್ಟಿದ್ರೂ ವ್ಯಕ್ತಿಯ ಪ್ರಾಣ ಮಾತ್ರ ಉಳಿದಿಲ್ಲ. ಕೊರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಜನರ ಆರೋಗ್ಯ ಸ್ಥಿತಿ ಚಿಂತಾಜನಕವಾದಾಗ ಮಾತ್ರ ಅವರಿಗೆ ರೆಮ್​​ ಡಿಸೈವರ್, ತೊಸಿಲಿಜುಮಪ್ ಇಂಜೆಕ್ಷನ್​​ ನೀಡಲಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಔಷಧಿ ಅಂಗಡಿಗಳಲ್ಲಿ ಲಭ್ಯವಾಗುತ್ತಿಲ್ಲ. ಕೆಲವೊಂದು ಶಾಪ್​ಗಳಲ್ಲಿ ಇದ್ದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಹೈದರಾಬಾದ್​​ನಲ್ಲಿ ಪ್ಲಾಸ್ಮಾ ದಾನಕ್ಕೂ ಇನ್ನಿಲ್ಲದ ಬೆಲೆ ಇದ್ದು, ಸುಮಾರು 50ರಿಂದ 2 ಲಕ್ಷದವರೆಗೂ ಹಣ ನೀಡಿ ಪಡೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details