ಡೆಹ್ರಾಡೂನ್ (ಉತ್ತರಾಖಂಡ): ವಿಶ್ವದ ಅತಿ ದೊಡ್ಡ ಧಾರ್ಮಿಕ ಸಮಾವೇಶಗಳಲ್ಲೊಂದಾದ ಕುಂಭ ಮೇಳಕ್ಕೂ ಕೋವಿಡ್-19 ಕರಿಛಾಯೆ ತಟ್ಟಿದೆ.
ಕುಂಭ ಮೇಳದ ಮೇಲೂ ಕೋವಿಡ್-19 ಕರಿಛಾಯೆ - ಕುಂಭ ಮೇಳ
ದೇವಾಲಯಗಳ ನಗರಿ ಉತ್ತರಾಖಂಡ್ನಲ್ಲಿ ಮುಂದಿನ ವರ್ಷದ ಮಾರ್ಚ್ 11 ರಿಂದ ಕುಂಭ ಮೇಳ ಆರಂಭವಾಗಲಿದೆ. ಆದರೆ ಈ ಬಾರಿ ಕೊರೊನಾ ವೈರಸ್ ದಿಗ್ಬಂಧನಗಳಿಂದಾಗಿ ಧಾರ್ಮಿಕ ಕಾರ್ಯಕರ್ತರು ಕುಂಭ ಮೇಳದ ಸಿದ್ಧತೆಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ.
ದೇವಾಲಯಗಳ ನಗರಿ ಉತ್ತರಾಖಂಡ್ನಲ್ಲಿ ಮುಂದಿನ ವರ್ಷದ ಮಾರ್ಚ್ 11 ರಿಂದ ಕುಂಭ ಮೇಳ ಆರಂಭವಾಗಲಿದೆ. ಪ್ರತಿ 12 ವರ್ಷಗಳಿಗೊಮ್ಮೆ ದೇಶದ ನಾಲ್ಕು ಸ್ಥಳಗಳಲ್ಲಿ ಅಂದರೆ ಅಲಹಾಬಾದ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಗಳಲ್ಲಿ ಕುಂಭ ಮೇಳ ಜರುಗುತ್ತದೆ. ಕುಂಭ ಮೇಳದಂದು ನದಿಯಲ್ಲಿ ಪವಿತ್ರ ಸ್ನಾನ ಮಾಡಲು ದೇಶ ವಿದೇಶಗಳಿಂದ ಕೋಟ್ಯಂತರ ಭಕ್ತರು ಆಗಮಿಸುತ್ತಾರೆ.
ಆದರೆ ಈ ಬಾರಿ ಕೊರೊನಾ ವೈರಸ್ ದಿಗ್ಬಂಧನಗಳಿಂದಾಗಿ ಧಾರ್ಮಿಕ ಕಾರ್ಯಕರ್ತರು ಕುಂಭ ಮೇಳದ ಸಿದ್ಧತೆಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಭಾನುವಾರದಂದು ಉತ್ತರಾಖಂಡ್ ಸರ್ಕಾರ ಸಂಪೂರ್ಣ ಲಾಕ್ಡೌನ್ ಘೋಷಿಸಿರುವುದರಿಂದ ಕುಂಭ ಮೇಳದ ತಯಾರಿಗೆ ಅಡ್ಡಿಯುಂಟಾಗುತ್ತಿದೆ.