ಕರ್ನಾಟಕ

karnataka

ETV Bharat / bharat

#Besafe: ನೀವು ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತೀರಾ..? ಈ ಸಮಯದಲ್ಲಿ ಎಚ್ಚರಿಕೆಯಿಂದಿರಿ..!

ಕಾಂಟ್ಯಾಕ್ಟ್ ಲೆನ್ಸ್‌ಗಳ ಮೂಲಕವೂ ಕೊರೊನಾ ವೈರಸ್ ಹರಡುತ್ತದೆಯೇ ಎಂಬ ಬಗ್ಗೆ ಅನುಮಾನಗಳು ಈಗ ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ನ್ಯೂಜೆರ್ಸಿಯ ರುಟ್‌ಗರ್ಸ್ ಮೆಡಿಕಲ್ ಸ್ಕೂಲ್‌ನ ನೇತ್ರಶಾಸ್ತ್ರದ ಸಹಾಯಕ ಪ್ರೊಫೆಸರ್ ಡೇವಿಡ್ ಚೂ ಕೆಲವು ಸಲಹೆಗಳನ್ನು ನೀಡಿದ್ದಾರೆ.

corona effect on Contact Lenses
ಕಾಂಟ್ಯಾಕ್ಟ್ ಲೆನ್ಸ್‌ಗಳ ಮೂಲಕವೂ ಕೊರೊನಾ ವೈರಸ್

By

Published : Apr 24, 2020, 11:58 AM IST

ನವದೆಹಲಿ: ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುತ್ತಿರುವವರು ಈಗ ತುಂಬಾ ಕಾಳಜಿ ವಹಿಸಬೇಕಿದೆ. ಕಾಂಟ್ಯಾಕ್ಟ್ ಲೆನ್ಸ್‌ಗಳ ಮೂಲಕವೂ ಕೊರೊನಾ ವೈರಸ್ ಹರಡುತ್ತದೆಯೇ ಎಂಬ ಬಗ್ಗೆ ಅನುಮಾನಗಳು ಈಗ ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ನ್ಯೂಜೆರ್ಸಿಯ ರುಟ್‌ಗರ್ಸ್ ಮೆಡಿಕಲ್ ಸ್ಕೂಲ್‌ನ ನೇತ್ರಶಾಸ್ತ್ರದ ಸಹಾಯಕ ಪ್ರೊಫೆಸರ್ ಡೇವಿಡ್ ಚೂ ಕೆಲವು ಸಲಹೆಗಳನ್ನು ನೀಡಿದ್ದಾರೆ. ಕಾಂಟ್ಯಾಕ್ಟ್‌ ಲೆನ್ಸ್‌ಗಳ ಮುಲಕ ಕೊರೊನಾ ವೈರಸ್ ಹರಡುವ ಯಾವುದೇ ಸಾಕ್ಷಿ ಇನ್ನೂ ಲಭ್ಯವಾಗಿಲ್ಲ. ಆದರೆ, ಲೆನ್ಸ್‌ಗಳು ಕೆಲವು ಬಾರಿ ಕಣ್ಣಿಗೆ ಕಿರಿಕಿರಿ ಉಂಟು ಮಾಡುತ್ತವೆ.

ಈ ಲೆನ್ಸ್‌ಗಳನ್ನು ಬಳಸುತ್ತಿರುವವರು ಸಾಮಾನ್ಯವಾಗಿ ತಮ್ಮ ಕಣ್ಣುಗಳನ್ನು ಮುಟ್ಟಿಕೊಳ್ಳುತ್ತಿರುತ್ತಾರೆ. ಕಿರಿಕಿರಿಯಾದಾಗ ಕಣ್ಣನ್ನು ಉಜ್ಜಿಕೊಳ್ಳುತ್ತಿರುತ್ತಾರೆ. ಈ ಹವ್ಯಾಸ ಹೆಚ್ಚಾಗಿ ಲೆನ್ಸ್ ಹೊಂದಿರುವವರಲ್ಲಿ ಕಂಡುಬರುತ್ತದೆ. ಇದರಿಂದಾಗಿ ಅವರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ನಾವು ಬಳಸುವ ಲೆನ್ಸ್‌ಗಳು ಶುಚಿಯಾಗಿರಬೇಕು. ಈ ಬಗ್ಗೆ ಲೆನ್ಸ್ ಧರಿಸುವವರು ವಿಶೇಷ ಕಾಳಜಿ ವಹಿಸಬೇಕು. ಲೆನ್ಸ್ ಧರಿಸುವುದಕ್ಕೂ ಮೊದಲು ಕನಿಷ್ಠ 20 ಸೆಕೆಂಡುಗಳವರೆಗೆ ಸೋಪ್ ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಕೈ ಒಣಗಿದ್ದಾಗ ಮಾತ್ರವೇ ಲೆನ್ಸ್‌ಗಳನ್ನು ಮುಟ್ಟಬೇಕು. ಕೈ ಒದ್ದೆಯಾಗಿದ್ದಾಗ ಯಾವುದೇ ಕಾರಣಕ್ಕೂ ಲೆನ್ಸ್‌ಗಳನ್ನು ಮುಟ್ಟಬಾರದು.

ಸಲಹೆಗಳು

  • ಈ ಸಮಯದಲ್ಲಿ ನಾವು ಲೆನ್ಸ್‌ಗಳಿಂದ ಕನ್ನಡಕಗಳಿಗೆ ಬದಲಿಸಿಕೊಳ್ಳಿ ಎಂದು ನಾವು ಸಲಹೆ ಮಾಡುವುದಿಲ್ಲ. ಆದರೆ, ವೈರಸ್‌ ತಗಲುವ ಹೆಚ್ಚು ರಿಸ್ಕ್ ಇರುವವರು ಮತ್ತು ಈಗಾಗಲೇ ಸೋಂಕು ಹೊಂದಿರುವವರು ಲೆನ್ಸ್‌ಗಳ ಬದಲಿಗೆ ಕನ್ನಡಕಗಳನ್ನು ಬಳಸುವುದು ಸೂಕ್ತ.
  • ಕೊರೊನಾ ವೈರಸ್ ಕಣ್ಣೀರಿನಲ್ಲಿ ಕಂಡುಬರುತ್ತಿದ್ದರೂ, ಅದು ಅಷ್ಟೇನೂ ಗಂಭೀರವಾಗಿ ಪರಿಗಣಿಸಬೇಕಾದ್ದಲ್ಲ. ಕಣ್ಣೀರಿನಿಂದ ವೈರಸ್ ಹರಡುತ್ತದೆ ಎಂಬುದು ಇನ್ನೂ ಸಾಬೀತಾಗಿಲ್ಲ. ಬಹುಶಃ ಇದು ಹೀಗೆ ಹರಡುವುದೂ ಇಲ್ಲ.
  • ಸಾಮಾನ್ಯವಾಗಿ ಕಣ್ಣು ಒದ್ದೆಯಾಗುವುದು, ಕಣ್ಣು ಕೆಂಪಾಗುವುದು ಹಾಗೂ ಇತರ ಸಮಸ್ಯೆಗಳು ಅಂಗಾಂಶಗಳ ಊತ ಮತ್ತು ಅಲರ್ಜಿಯಿಂದ ಕಂಡುಬರುತ್ತವೆ. ಆದರೆ ಕಣ್ಣು ಒದ್ದೆಯಾಗುವುದು ಕೂಡ ಕೊರೊನಾವೈರಸ್‌ನ ಒಂದು ಅಪರೂಪದ ಗುಣಲಕ್ಷಣ ಎಂದು ಹೇಳಲಾಗಿದೆ.
  • ಕಣ್ಣು ನೋವು ಬರುತ್ತಿದ್ದರೆ ಲೆನ್ಸ್‌ಗಳನ್ನು ಬಳಸುವವರು ತಕ್ಷಣ ಬಳಕೆಯನ್ನು ನಿಲ್ಲಿಸಬೇಕು. ಇಲ್ಲವಾದರೆ, ಕಣ್ಣಿನ ಸಮಸ್ಯೆ, ಸೋಂಕು ಮತ್ತು ದೃಷ್ಟಿ ಕಳೆದುಕೊಳ್ಳುವ ಅಪಾಯ ಹೆಚ್ಚಿರುತ್ತದೆ.
  • ಲೆನ್ಸ್ ಉತ್ಪಾದಿಸಿದವರು ಮತ್ತು ನೇತ್ರಶಾಸ್ತ್ರಜ್ಞರ ಸೂಚನೆಗಳನ್ನು ಅನುಸರಿಸಿ. ನಿದ್ರೆ ಮಾಡುವುದಕ್ಕೂ ಮುನ್ನ ಲೆನ್ಸ್ ಅನ್ನು ತೆಗೆಯಬೇಕು. ತೆಗೆಯುವಾಗ ಮತ್ತು ಮರುಬಳಕೆ ಮಾಡುವಾಗ ಸ್ವಚ್ಛಗೊಳಿಸಿಕೊಳ್ಳುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ. ಸೋಂಕಿನಿಂದ ಮುಕ್ತವಾದ ಸ್ಥಳದಲ್ಲಿ ಲೆನ್ಸ್‌ಗಳನ್ನು ಇಟ್ಟುಕೊಳ್ಳಬೇಕು.

ABOUT THE AUTHOR

...view details