ತಿರುವನಂತಪುರ:ಕೇರಳದ ವಯನಾಡಿನಲ್ಲಿ ಗುರುವಾರ ನಾಮಪತ್ರ ಸಲ್ಲಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಒಟ್ಟು ಆಸ್ತಿ ಮೊತ್ತ 14.85 ಕೋಟಿ ರೂ. ಎಂದು ಘೋಷಿಸಿದ್ದಾರೆ.
2014ರ ಚುನಾವಣೆ ವೇಳೆ 10 ಕೋಟಿ ರೂ. ಆಸ್ತಿ ಹೊಂದಿದ್ದಾಗಿ ರಾಹುಲ್ ಘೋಷಣೆ ಮಾಡಿದ್ದರು. ಐದು ವರ್ಷಗಳ ಅವಧಿಯಲ್ಲಿ ಅವರ ಆಸ್ತಿ 4.85 ಕೋಟಿ ರೂ. ಏರಿಕೆಯಾಗಿದೆ. ವಯನಾಡು ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಮೊದಲು ರಾಹುಲ್ ಈ ಮಾಹಿತಿ ತಿಳಿಸಿದ್ದಾರೆ.
2019 ಹಾಗೂ 2014ರ ರಾಹುಲ್ ಗಾಂಧಿ ಆಸ್ತಿ ಮೊತ್ತ ಇಂತಿದೆ:
2019 -2014:
- ಚರಾಸ್ತಿ 5,80,58,799 - 8,07,58,265 (ರೂ.ಗಳಲ್ಲಿ)
- ಸ್ಥಿರಾಸ್ತಿ 7,93,03,977 - 1,32,48,284
- ವಾರ್ಷಿಕ ಆದಾಯ 1,11,85,570 (2017-18ರಲ್ಲಿ) - 92,46,973 (2012-13ರಲ್ಲಿ)
- ವೈಯಕ್ತಿಕ ಸಾಲ 5 ಲಕ್ಷ ( ತಾಯಿ ಸೋನಿಯಾ ಗಾಂಧಿ ಅವರಿಂದ ಪಡೆದ ಸಾಲ) - 72,01,904 (ಬ್ಯಾಂಕ್ಗಳಿಂದ)
- ಸಾಲದ ಹೊಣೆಗಾರಿಕೆ 72,01,904
- ಸ್ವಂತ ಆಸ್ತಿ 8,75,70,000
- ಬ್ಯಾಂಕ್ಗಳಲ್ಲಿ ಠೇವಣಿ 17,93,693 9,50,575
ಅಷ್ಟೇ ಅಲ್ಲದೆ, 2014ರಲ್ಲಿ
- 5,19,44,682 ರೂ. ಮೊತ್ತದ ಷೇರು ಹಾಗೂ ಬಾಂಡ್
- 39,89,037 ರೂ. ಮೊತ್ತದ ಪಿಪಿಎಫ್ ಹಾಗೂ ಅಂಚೆ ಉಳಿತಾಯ
- 2,91,367 ರೂ. ಮೊತ್ತದ ಚಿನ್ನಾಭರಣಗಳು
- ಸಹೋದರಿ ಪ್ರಿಯಾಂಕಾರೊಂದಿಗೆ ಮೆಹ್ರೌಲಿಯಲ್ಲಿ 2.34 ಎಕರೆ ಕೃಷಿ ಭೂಮಿ
- 1,32,48,284 ರೂ. ಪಿತ್ರಾರ್ಜಿತ ಆಸ್ತಿ
- 8,75,70,000 ರೂ. ಮೊತ್ತದ ಕಮರ್ಷಿಯಲ್ ಬಿಲ್ಡಿಂಗ್
- 81,28,153 ರೂ. ಮೊತ್ತದ ಮ್ಯೂಚುಯಲ್ ಫಂಡ್
- 20,70,146 ರೂ ಮೊತ್ತದ ಪೋಸ್ಟಲ್ ಹಾಗೂ ರಾಷ್ಟ್ರೀಯ ಉಳಿತಾಯ ಯೋಜನೆಗಳು ಇವೆ ಎಂದು ಘೋಷಿಸಿದ್ದರು.