ಕರ್ನಾಟಕ

karnataka

By

Published : Jan 12, 2020, 5:46 AM IST

ETV Bharat / bharat

ಸಿಎಎ ಬೆಂಬಲಿಸಿದ ಕಾಂಗ್ರೆಸ್​ ಮುಖಂಡ... NRCಯಿಂದ ಪ್ರತ್ಯೇಕವಾಗಿ ನೋಡುವಂತೆ ಸಲಹೆ

ಸಿಎಎಗೆ ನನ್ನ ಬೆಂಬಲವಿದೆ ಎಂದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ಡಾಂಗ್​ ಅವರು, ಇದನ್ನು ನಾವು ರಾಷ್ಟ್ರೀಯ ನಾಗರಿಕ ನೋಂದಣಿಯಿಂದ ಪ್ರತ್ಯೇಕವಾಗಿ ನೋಡಬೇಕಾಗಿದೆ. ಸಿಎಎ ಮತ್ತು ಎನ್‌ಆರ್‌ಸಿಯನ್ನು ಪ್ರತ್ಯೇಕವಾಗಿ ನೋಡಿದರೆ ಮಾತ್ರ ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಯಾರಾದರೂ ಬಂದು ಇಲ್ಲಿ ಸೌಲಭ್ಯಗಳನ್ನು ಪಡೆದರೆ ಯಾವುದೇ ಹಾನಿ ಇಲ್ಲ ಎಂದರು.

ಕಾಂಗ್ರೆಸ್ ಶಾಸಕ ಸಿಎಎಗೆ ಬೆಂಬಲ
Congress MLA Support CAA

ಮಾಂಡ್‌ಸೌರ್ (ಮಧ್ಯಪ್ರದೇಶ): ಇಲ್ಲಿನ ಸ್ವಸ್ರಾದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ಡಾಂಗ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಬೆಂಬಲಿಸಿದ್ದಾರೆ.

ಸಿಎಎಗೆ ನನ್ನ ಬೆಂಬಲವಿದೆ. ಇದನ್ನು ನಾವು ರಾಷ್ಟ್ರೀಯ ನಾಗರಿಕ ನೋಂದಣಿಯಿಂದ (ಎನ್​ಆರ್​ಸಿ) ಪ್ರತ್ಯೇಕವಾಗಿ ನೋಡಬೇಕಾಗಿದೆ. ಸಿಎಎ ಮತ್ತು ಎನ್‌ಆರ್‌ಸಿಯನ್ನು ಪ್ರತ್ಯೇಕವಾಗಿ ನೋಡಿದರೆ ಮಾತ್ರ ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಯಾರಾದರೂ ಬಂದು ಇಲ್ಲಿ ಸೌಲಭ್ಯಗಳನ್ನು ಪಡೆದರೆ ಯಾವುದೇ ಹಾನಿ ಇಲ್ಲ ಎಂಬುದು ಮನವರಿಕೆ ಆಗುತ್ತದೆ ಎಂದರು.

ಎನ್‌ಆರ್‌ಸಿ ಅಡಿಯಲ್ಲಿ ದಾಖಲೆಗಳನ್ನು ನೀಡುವಂತೆ ಭಾರತದಲ್ಲಿ ಹುಟ್ಟಿ ಬೆಳೆದ ಜನರನ್ನು ಕೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ರಾಜಕೀಯ ಇಡೀ ಸಿಎಎ ಮತ್ತು ಎನ್​ಆರ್​ಸಿಯನ್ನು ಸಮಿಶ್ರಣ ಮಾಡಿದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದುಗೊಳಿಸಿದ್ದಾಗ ಕೇಂದ್ರದ ಕ್ರಮವನ್ನು ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ನಾನು ಬೆಂಬಲಿಸಿದ್ದೇನೆ ಎಂದು ಡಾಂಗ್​ ಹೇಳಿದರು.

ABOUT THE AUTHOR

...view details