ಬೆಗುನ್(ರಾಜಸ್ಥಾನ):ರಾಜ್ಯದ ಕಾಂಗ್ರೆಸ್ ಶಾಸಕ ರಾಜೇಂದ್ರ ಬಿದೂರಿ, ಬಿಜೆಪಿ ಬೆಂಬಲಿಗಳು ಎಂಬ ಕಾರಣಕ್ಕೆ ಮಹಿಳೆಗೆ ಉಚಿತ ಪಡಿತರ ನೀಡದೆ ನಿಂದಿಸಿ ಕಳುಹಿಸಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಚಿತ್ರೀಕರಣಗೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಾಸಕ ರಾಜೇಂದ್ರ ಬಿದೂರಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗ ಮಹಿಳೆಯೋರ್ವವಳು ಉಚಿತ ಪಡಿತರ ಪಡೆಯುವ ನಿಟ್ಟಿನಲ್ಲಿ ಸರತಿ ಸಾಲಿನಲ್ಲಿ ಬಂದಾಗ ಈ ಘಟನೆ ನಡೆದಿದೆ.