ಕರ್ನಾಟಕ

karnataka

ETV Bharat / bharat

ಆರ್ಟಿಕಲ್​​ 370 ರದ್ದು: ಕೇಂದ್ರ ಸರ್ಕಾರದ ನಡೆಗೆ ಜೈ ಎಂದ 'ಕೈ'​ ನಾಯಕ ಜ್ಯೋತಿರಾದಿತ್ಯ!

ಆರ್ಟಿಕಲ್​​ 370 ರದ್ದು ಆಗುತ್ತಿದ್ದಂತೆ ಅನೇಕರು ಕೇಂದ್ರದ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಕೆ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್​ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರಕ್ಕೆ ಜೈ ಎಂದು ಹೇಳಿ ಟ್ವೀಟ್​ ಮಾಡಿದ್ದಾರೆ.

Jyotiraditya Scindia

By

Published : Aug 6, 2019, 8:00 PM IST

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಂಡಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲೂ ಬಿಲ್​ ಪಾಸ್​ ಆಗಿದೆ. ಇದೀಗ ಕಾಂಗ್ರೆಸ್​ನ ಹಲವು ಮುಖಂಡರು ಕೇಂದ್ರ ಸರ್ಕಾರದ ನಡೆಗೆ ಜೈಕಾರ ಹಾಕುತ್ತಿದ್ದಾರೆ.

ಉತ್ತರಪ್ರದೇಶದ ರಾಯಬರೇಲಿ ಕಾಂಗ್ರೆಸ್​ ಶಾಸಕಿ ಅದಿತಿ ಸಿಂಗ್, ಬಿಹಾರದ ಕಾಂಗ್ರೆಸ್​ ಮುಖಂಡೆ ರಂಜಿತಾ ರಂಜನ್​​ ಕೇಂದ್ರದ ನಡೆಗೆ ಸ್ವಾಗತ ಕೋರಿದ್ದು, ಇದರ ಮಧ್ಯೆ ಮಧ್ಯಪ್ರದೇಶದ ಕಾಂಗ್ರೆಸ್​​ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಕೇಂದ್ರದ ನಿರ್ಧಾರಕ್ಕೆ ಜೈಕಾರ ಹಾಕಿದ್ದಾರೆ.

ಸಿಂಧಿಯಾ ತಮ್ಮ ಟ್ವಿಟರ್ ಅಕೌಂಟ್​​ನಲ್ಲಿ ಆರ್ಟಿಕಲ್​ 370 ವಿಧಿ ರದ್ದತಿ ಬಗ್ಗೆ ಬರೆದುಕೊಂಡಿದ್ದು, ಜಮ್ಮು-ಕಾಶ್ಮೀರ ಹಾಗೂ ಲಡಾಕ್​​ ಬಗ್ಗೆ ಕೇಂದ್ರ ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ಸಪೋರ್ಟ್​ ಇದೆ ಎಂದಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್​​ ಒಕ್ಕೂಟ ಭಾರತವನ್ನ ಸಂಪೂರ್ಣವಾಗಿ ಒಳಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಅಖಂಡ ಭಾರತದ ಅಭಿವೃದ್ಧಿಗಾಗಿ ಕೇಂದ್ರ ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ಬೆಂಬಲವಿದ್ದು, ಸಾಂವಿಧಾನಿಕ ಪ್ರಕ್ರಿಯೆ ಅನುಸರಿಸಿದ್ದರೆ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ಬಿಲ್​ ಅಂಗೀಕಾರಗೊಂಡಿತ್ತು. ಇಂದು ಲೋಕಸಭೆಯಲ್ಲೂ ಜಮ್ಮು-ಕಾಶ್ಮೀರ ಪುನಾರಚನೆ ಬಿಲ್​ ಅಂಗೀಕಾರವಾಗಿರುವುದರಿಂದ ಜಮ್ಮು-ಕಾಶ್ಮೀರ್ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಲಡಾಕ್​ ಕೇಂದ್ರಾಡಳಿತ ಪ್ರದೇಶ ಮಾತ್ರವಾಗಿರಲಿದೆ.

ABOUT THE AUTHOR

...view details