ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಉರ್ಮಿಳಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಮುಂಜಾನೆಯಿಂದಲೇ ದಾಹಿಸರ್ ಏರಿಯಾದಲ್ಲಿ ಸುತ್ತಾಡಿ ಮತದಾರನ್ನು ಒಲಿಸಿಕೊಳ್ಳಲು ಪ್ರಯತ್ನ ನಡೆಸಿದ್ರು. ವೋಟ್ ಕೇಳಲು ಬಂದಿದ್ದ ಉರ್ಮಿಳಾಗೆ ಸ್ಥಳೀಯರಿಂದಲೂ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ನಟಿಗೆ ಮಂಗಳಾರತಿ ಮಾಡಿ ನಿಮಗೆ ಗೆಲುವಾಗಲಿ ಎಂದು ಜನರು ಹಾರೈಸಿದರು.
ಮತಬೇಟೆ ಚುರುಕುಗೊಳಿಸಿದ ನಟಿ ಉರ್ಮಿಳಾ.. ಆರತಿ ಎತ್ತಿ ಗೆಲುವಾಗಲೆಂದು ಹಾರೈಸಿದ ಜನರು - ಬಿಟೌನ್ ರಂಗೀಲಾ
ಮುಂಬೈ : ಬಾಲಿವುಡ್ ನಟಿ ಉರ್ಮಿಳಾ ಮಾತೋಡ್ಕರ್ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಚೊಚ್ಚಲ ಗೆಲುವಿನ ಪಣ ತೊಟ್ಟಿರುವ ಬಿಟೌನ್ ರಂಗೀಲಾ, ಬೀದಿ ಬೀದಿ ಸುತ್ತಿ ಮತಯಾಚನೆ ನಡೆಸುತ್ತಿದ್ದಾರೆ.
ನಟಿ ಉರ್ಮಿಳಾ
ಇನ್ನು ಮಹಾರಾಷ್ಟ್ರದಲ್ಲಿ ಮೂರು ಹಂತದ ಮತದಾನ ಮುಗಿದಿದ್ದು, ನಾಲ್ಕನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ.