ಕರ್ನಾಟಕ

karnataka

ETV Bharat / bharat

ನಾವು ಗಾಂಧಿ ಮಾರ್ಗದಲ್ಲಿ ರಾಜಕೀಯ ಬಿಕ್ಕಟ್ಟು ಪರಿಹರಿಸಿಕೊಳ್ಳುತ್ತೇವೆ: ಕಾಂಗ್ರೆಸ್​ ವಿಶ್ವಾಸ

ರಾಜಸ್ಥಾನ ರಾಜಕೀಯ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. 19 ರೆಬಲ್​ ಶಾಸಕರಲ್ಲಿ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್​ ಹೇಳಿದೆ.

Avinash Pande  political crisis in Rajasthan  Sachin Pilot  Ashok Gehlot  Congress general secretary  ರಾಜಸ್ಥಾನ ರಾಜಕೀಯ  ರಾಜಸ್ಥಾನ ರಾಜಕೀಯ ಬಿಕ್ಕಟ್ಟು,  ರಾಜಸ್ಥಾನ ರಾಜಕೀಯ ಸುದ್ದಿ,  ಅವಿನಾಶ್​ ಪಾಂಡೆ  ಅವಿನಾಶ್​ ಪಾಂಡೆ ಸುದ್ದಿ,
19 ರೆಬಲ್​ ಶಾಸಕರಲ್ಲಿ ಕೆಲವರು ಸಂಪರ್ಕದಲ್ಲಿದ್ದಾರೆ

By

Published : Jul 28, 2020, 7:09 AM IST

ಜೈಪುರ:ಉಚ್ಚಾಟಿತ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದ 19 ಬಂಡಾಯ ಶಾಸಕರಲ್ಲಿ ಅನೇಕರು ಪಕ್ಷದ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ಪಕ್ಷದ ರಾಜ್ಯದ ಉಸ್ತುವಾರಿ ಆಗಿರುವ ಅವಿನಾಶ್​ ಪಾಂಡೆ, ರಾಜ್ಯದಲ್ಲಿ ಪ್ರಸ್ತುತ ಉದ್ಭವವಾಗಿರುವ ರಾಜಕೀಯ ಅನಿಶ್ಚಿತತೆಯನ್ನ ಕೊನೆಗಾಣಿಸಲು ಕಾಂಗ್ರೆಸ್​ ಪ್ರಜಾತಂತ್ರದ ವಿಧಾನಗಳನ್ನ ಬಳಸಿ ಸಮಸ್ಯೆ ಬಗೆಹರಿಸುತ್ತದೆ ಎಂದು ತಿಳಿಸಿದ್ದಾರೆ.

‘ನಾವು ಪ್ರಜಾಪ್ರಭುತ್ವದ ಉಳಿಸಲು ಇರುವ ಎಲ್ಲ ಗಾಂಧಿ ನೀತಿಗಳನ್ನ ಬಳಕೆ ಮಾಡುತ್ತೇವೆ. ಅಗತ್ಯ ಬಿದ್ದರೆ ಸಿಎಂ ಅಶೋಕ್​ ಗೆಹ್ಲೋಟ್​​​ ರಾಷ್ಟ್ರಪತಿಗಳ ಮುಂದೆ ಎಲ್ಲ ಶಾಸಕರೊಂದಿಗೆ ಪರೇಡ್​ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಕಳೆದ 70 ವರ್ಷಗಳಲ್ಲಿ ಅಧಿವೇಶನ ಕರೆಯುವ ಸರ್ಕಾರದ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನ ಯಾವುದೇ ರಾಜ್ಯಪಾಲರು ಮಾಡಿಲ್ಲ. ಆದರೆ, ಈಗಿನ ರಾಜ್ಯಪಾಲರು ವಿನಾಕಾರಣ ಅಧಿವೇಶನ ಕರೆಯಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಮಧ್ಯ ಸಿಎಂ ಗೆಹ್ಲೋಟ್​​ ರಾಜ್ಯ ರಾಜಕೀಯ ಪರಿಸ್ಥಿತಿ ಹಾಗೂ ರಾಜ್ಯಪಾಲರ ನಡೆ ಬಗ್ಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​​ಗೆ ಕಾಂಗ್ರೆಸ್​ ಪತ್ರ ಬರೆದಿದೆ. ಅಲ್ಲದೇ ಈ ಸಂಬಂಧ ಪ್ರಧಾನಿ ಮೋದಿ ಅವರ ಜತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details