ಕರ್ನಾಟಕ

karnataka

ETV Bharat / bharat

ಸಿಎಂ ಸ್ಥಾನ ಕಳೆದುಕೊಳ್ಳುವ ಭೀತಿ: ಮೋದಿ ಜತೆ ದೂರವಾಣಿ ಮೂಲಕ ಉದ್ಧವ್​ ಮಾತು

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಉದ್ಧವ್ ಠಾಕ್ರೆ ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದೇಕೆ ಗೊತ್ತೇ?

CM Thackeray
CM Thackeray

By

Published : Apr 30, 2020, 10:49 AM IST

ಮುಂಬೈ:ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಮಧ್ಯೆ ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ.

ಕಳೆದ ನವೆಂಬರ್​ 28ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವ ಠಾಕ್ರೆ ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಹೀಗಾಗಿ ರಾಜ್ಯ ವಿಧಾನಸಭೆಯಲ್ಲಿ ಸದಸ್ಯರಾಗಲು ಅವರಿಗೆ 6 ತಿಂಗಳ ಕಾಲಾವಕಾಶವಿತ್ತು. ಅದರ ಗಡುವು ಮೇ 28ರಂದು ಕೊನೆಗೊಳ್ಳಲಿದೆ.

ದೇಶದಲ್ಲಿ ಕೊರೊನಾ ವೈರಸ್​ ಭೀತಿ ಹೆಚ್ಚಾಗಿರುವ ಕಾರಣ ವಿಧಾನ ಪರಿಷತ್​ಗೆ ಘೋಷಣೆಯಾಗಿದ್ದ ಚುನಾವಣೆ ಮುಂದೂಡಿಕೆಯಾಗಿದ್ದು, ಹೀಗಾಗಿ ಶಾಸಕಾಂಗ ಸದಸ್ಯರಾಗಿ ಆಯ್ಕೆಯಾಗಲು ಸಾಧ್ಯವಾಗಿಲ್ಲ. ಇದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಈಗಾಗಲೇ ರಾಜ್ಯಪಾಲರ ಕೋಟಾದಲ್ಲಿರುವ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಉದ್ಧವ್​ ಠಾಕ್ರೆ ಹೆಸರು ನಾಮ ನಿರ್ದೇಶನ ಮಾಡುವಂತೆ ಈಗಾಗಲೇ ಸಂಪುಟ ಸಚಿವರು ಶಿಫಾರಸು ಮಾಡಿದ್ದು, ಅದನ್ನು ಅಂಗೀಕರಿಸಿಲು ರಾಜ್ಯಪಾಲ ಭಗತ್​ ಸಿಂಘ್​ ಕೋಶ್ಯಾರಿ ಮನಸ್ಸು ಮಾಡಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಜತೆ ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿದೆ.

ವಿಧಾನ ಪರಿಷತ್​ಗೆ ತುರ್ತು ಚುನಾವಣೆ ನಡೆಸುವಂತೆ ಅವರು ನಮೋ ಬಳಿ ಮನವಿ ಮಾಡಿಕೊಂಡಿದ್ದು, ಒಂದು ವೇಳೆ ಅದು ನಡೆಯದೇ ಹೋದರೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ABOUT THE AUTHOR

...view details