ಕರ್ನಾಟಕ

karnataka

ETV Bharat / bharat

ಶಿಕ್ಷಣ ಸಂಪೂರ್ಣ ಡಿಜಿಟಲೀಕರಣಗೊಂಡ ಮೊದಲ ರಾಜ್ಯ: ಕೇರಳ ಸಿಎಂ ಘೋಷಣೆ - Kerala as the first state to go digital in public education

ಕೇರಳವನ್ನು ಸಾರ್ವಜನಿಕ ಶಿಕ್ಷಣದಲ್ಲಿ ಡಿಜಿಟಲೀಜಿಕರಣಗೊಂಡ ಮೊದಲ ರಾಜ್ಯ ಎಂದು ಸಿಎಂ ಪಿಣರಾಯಿ ವಿಜಯನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಘೋಷಿಸಿದ್ದಾರೆ.

CM Pinarayi Vijayan declared Kerala as the first state to go digital in public education
ಕೇರಳ ಸಾರ್ವಜನಿಕ ಶಿಕ್ಷಣದಲ್ಲಿ ಡಿಜಿಟಲೀಜಿಕರಣಗೊಂಡ ಮೊದಲ ರಾಜ್ಯವೆಂದು ಘೊಷಣೆ

By

Published : Oct 12, 2020, 3:04 PM IST

ತಿರುವನಂತಪುರಂ (ಕೇರಳ): ಕೇರಳವನ್ನು ಸಾರ್ವಜನಿಕ ಶಿಕ್ಷಣದಲ್ಲಿ ಡಿಜಿಟಲೀಜಿಕರಣಗೊಂಡ ಮೊದಲ ರಾಜ್ಯ ಎಂದು ಸಿಎಂ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಣರಾಯಿ ವಿಜಯನ್​, ಡಿಜಿಟಲೀಕರಣದ ಭಾಗವಾಗಿ ರಾಜ್ಯದ ಎಲ್ಲ ಸಾರ್ವಜನಿಕ ಶಾಲೆಗಳಲ್ಲಿ ಹೈಟೆಕ್ ತರಗತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಸ್ಮಾರ್ಟ್ ತರಗತಿ ಯೋಜನೆಗಾಗಿ 16,027 ಶಾಲೆಗಳಿಗೆ 3,74,274 ಡಿಜಿಟಲ್ ಸಾಧನಗಳನ್ನು ವಿತರಿಸಲಾಗಿದೆ. ಮೊದಲ ಹಂತದಲ್ಲಿ 1 ರಿಂದ 7ನೇ ತರಗತಿಗೆ ಹೈಟೆಕ್​ ಲ್ಯಾಬ್​ ಹಾಗೂ 8 ರಿಂದ 12 ತರಗತಿಗಳಿಗೆ ಹೈಟೆಕ್ ತರಗತಿ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.

ಈ ಯೋಜನೆಗೆ ಪ್ರಮುಖವಾಗಿ ಕೆಐಐಎಫ್​ಬಿ ಅನುದಾನ ನೀಡಿದ್ದು, ಇದರ ಹೊರತಾಗಿ ಸಾರ್ವಜನಿಕ ಆಸ್ತಿ ಅಭಿವೃದ್ಧಿ ನಿಧಿ ಮತ್ತು ಸ್ಥಳೀಯ ಸರ್ಕಾರದ ಹಣವನ್ನು ಬಳಸಿಕೊಳ್ಳಲಾಗಿದೆ ಎಂದರು.

ABOUT THE AUTHOR

...view details