ಕೊಂಡಗಾಂವ್ (ಛತ್ತೀಸ್‌ಗಢ): ಸರ್ಕಾರಿ ಶಾಲೆಗೆ ಕಟ್ಟಡ ಇಲ್ಲದೇ ಶಿಕ್ಷಕರು ಹರಕು ಮುರುಕು ಜೋಪಡಿಯಲ್ಲೇ ಮಕ್ಕಳಿಗೆ ಪಾಠ ಹೇಳುವಂತ ದಯನಿಯ ಸ್ಥಿತಿಗೆ ತಲುಪಿರುವ ಶಾಲೆಯೊಂದು ಕೊಂಡಗಾಂವ್ನಲ್ಲಿದೆ.
ಮಳೆ ಬಂದ್ರೆ ಅಘೋಷಿತ ರಜೆ... ಹರಕಲು ಜೋಪಡಿಯೇ ಶಾಲೆ..! - kannada news
ಹರಕು ಮುರುಕು ಜೋಪಡಿಯೇ ಮಕ್ಕಳಿಗೆ ಪಾಠ ಹೇಳುವ ಶಾಲೆ. ಈ ಸರ್ಕಾರಿ ಶಾಲೆಗೆ ಮಳೆಗಾಲ ಬಂದ್ರೆ ಶಾಲೆಗೆ ಅಘೋಷಿತ ರಜೆಯಂತೆ. ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದಿದ್ದರೂ ಸರ್ಕಾರ ಶಾಲೆಗಳಿಗೆ ಸ್ವಂತ ಕಟ್ಟಡ ಕಟ್ಟಲಾರದ ಸ್ಥಿತಿ ಇಲ್ಲಿಯದ್ದು.
ಮಳೆಗಾಲ ಬಂದ್ರೆ ತಲೆ ಮೇಲೆ ನೆರಳೇ ಇರದ ಇದೇ ಜೋಪಡಿಯಲ್ಲಿ ಕುಳಿತು ಮಕ್ಕಳು ಪಾಠ ಕೇಳೋದಕ್ಕೆ ಆಗೋದಿಲ್ಲ. ಅದಕ್ಕಾಗಿ ಮಳೆಗಾಲ ಬಂದ್ರೆ ಶಾಲೆಗೆ ಅಘೋಷಿತ ರಜೆ ಇರುತ್ತಂತೆ. 'ನಾನು ಇಲ್ಲಿ 2011ರಿಂದಲೂ ಮಕ್ಕಳಿಗೆ ಪಾಠ ಹೇಳುತ್ತಿರುವೆ. ಶಾಲೆಗೆ ಕಟ್ಟಡ ಕಟ್ಟಿಸಿಕೊಡುವುದಾಗಿ ಅಧಿಕಾರಿಗಳು ಮೇಲಿಂದ ಮೇಲೆ ಭರವಸೆಗಳನ್ನ ಕೊಡುತ್ತಲೇ ಬಂದಿದ್ದಾರೆ. ಆದರೆ, ಈವರೆಗೂ ಆ ಭರವಸೆ ಬರೀ ಭರವಸೆಯಾಗಿಯೇ ಉಳಿದಿದೆ. ಮಕ್ಕಳಿಗೆ ಇದೇ ಜೋಪಡಿಯಲ್ಲಿ ವಿದ್ಯಾಭ್ಯಾಸ ಬೋಧಿಸಬೇಕಾದ ಅನಿವಾರ್ಯತೆಯಿದೆ' ಅಂತಾ ಶಿಕ್ಷಕ ಮನ್‌ಶಾರಾಮ್ ತಮ್ಮ ಬೇಸರ ತೋಡಿಕೊಂಡಿದ್ದಾರೆ.
ಈಗಲೂ ಸರ್ಕಾರಿ ಶಾಲೆಯಂದ್ರೆ ಅದೇ ಹರಕು ಮುರುಕು ಜೋಪಡಿಗಳು ಕಣ್ಮುಂದೆಯೇ ಬರುತ್ತವೆ. ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದಿದ್ದರೂ ಸರ್ಕಾರ ಶಾಲೆಗಳಿಗೆ ಸ್ವಂತ ಕಟ್ಟಡ ಕಟ್ಟಲಾರದಷ್ಟು ಸ್ಥಿತಿಯನ್ನ ಇನ್ನೂ ಅನುಭವಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಅಂತಾ ಅಲ್ಲಿನ ಜನರೇ ಈಗ ಮಾತಾಡಿಕೊಳ್ಳುತ್ತಿದ್ದಾರೆ.