ನವದೆಹಲಿ:ಅಂತಾರಾಷ್ಟ್ರೀಯ ಗಡಿ ನಿಯಂತ್ರಿಣ ರೇಖೆಯ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಯೋಧರು ಸಹ ಪ್ರತ್ಯುತ್ತರ ನೀಡುತ್ತಿದ್ದಾರೆ.
ಪಾಕ್ ಕದನ ವಿರಾಮ ಉಲ್ಲಂಘನೆ... ಯೋಧರಿಂದ ತಕ್ಕ ಪ್ರತ್ಯುತ್ತರ - ಎಲ್ಒಸಿ
ಕಾಶ್ಮೀರ ಗಡಿಯಲ್ಲಿ ಪಾಕ್ ಮತ್ತೆ ಉದ್ಧಟತನ ಮೆರೆದಿದೆ. ಭಾರತೀಯ ಪಡೆಗಳು ಕೂಡ ಪರಿಣಾಮಕಾರಿ ಪ್ರತಿ ದಾಳಿ ನಡೆಸಿವೆ. ಬೆಳಗ್ಗೆ 9 ಗಂಟೆಗೆ ದಾಳಿ ಆರಂಭಗೊಂಡಿದ್ದು, ಈಗಲೂ ಮುಂದುವರಿದಿದೆ.
ಮ್ಯಾನ್ ಕೋಟ್ ಹಾಗೂ ಕೃಷ್ಣ ಘಾಟಿ ಸೆಕ್ಟರ್ನಲ್ಲಿ ಪಾಕಿಸ್ತಾನಿ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ದಾಳಿಯಿಂದಾಗಿ ನಾಗರಿಕನೋರ್ವ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಕ್ಷಣ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.
ಪಾಕಿಸ್ತಾನ ಸೈನಿಕರು ನಡೆಸಿದ ಶೆಲ್ ದಾಳಿಯಿಂದಾಗಿ ಮ್ಯಾನ್ ಕೊಟ್ ಸೆಕ್ಟರ್ ನಲ್ಲಿನ ನಾರಾಲಾ ಗ್ರಾಮದ ಮೊಹಮ್ಮದ್ ಮುಸ್ತಕ್ ಎಂಬುವರು ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರ್ನಲ್ ಮಾಹಿತಿ ನೀಡಿದ್ದಾರೆ.