ದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ 1.62 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಹಾರ ನಿಧಿಗೆ (ಪಿಎಂ ಕೇರ್ಸ್) ಸ್ವಯಂ ಪ್ರೇರಣೆಯಿಂದ ನೀಡಿದ್ದಾರೆ.
ಒಂದು ದಿನದ ಸಂಬಳ ಪಿಎಂ ಕೇರ್ಸ್ ನಿಧಿಗೆ ನೀಡಿದ ಸಿಐಎಸ್ಎಫ್ ಸಿಬ್ಬಂದಿ
ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವ ನಿರ್ಗತಿಕರು, ಬಡವರಿಗೆ ಸಹಾಯ ಆಗುವ ದೃಷ್ಟಿಯಿಂದ ಸಿಐಎಸ್ಎಫ್ನ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ.
ಪಿಎಂ ಕೇರ್ಸ್ ಫಂಡ್
ಸಿಐಎಸ್ಎಫ್ ಮಹಾನಿರ್ದೇಶಕ ರಾಜೇಶ್ ರಂಜನ್ ಅವರು ಸೋಮವಾರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಹದಿನಾರು ಕೋಟಿ ಇಪ್ಪತ್ಮೂರು ಲಕ್ಷ ಎಂಭತ್ತೆರಡು ಸಾವಿರದ ಮುನ್ನೂರ ಐವತ್ತೇಳು ರೂಪಾಯಿ( 16.23 ಕೋಟಿ) ಮೌಲ್ಯದ ಚೆಕ್ ಹಸ್ತಾಂತರಿಸಿದರು.
ಈ ಹಣ ಕೊರೊನಾದಿಂದ ಸಂಕಷ್ಟಕ್ಕೊಳಗಾದ ದೇಶದ ನಿರ್ಗತಿಕರು, ಬಡವರಿಗೆ ಸಹಾಯವಾಗಲಿ ಎಂದು ಅವರು ತಿಳಿಸಿದ್ದಾರೆ.