ಕರ್ನಾಟಕ

karnataka

By

Published : Jul 9, 2020, 5:41 PM IST

ETV Bharat / bharat

ಸಿಪ್ಲಾ ರೆಮ್​ಡೆಸಿವಿರ್ ಜೆನೆರಿಕ್ ಆವೃತ್ತಿ ಬಿಡುಗಡೆ: ಪ್ರತಿ ಬಾಟಲಿಗೆ 4,000 ರೂ.

ಮೊದಲ ತಿಂಗಳಲ್ಲಿ 80,000 ಬಾಟಲಿಗಳನ್ನು ಪೂರೈಸಲು ಸಿಪ್ಲಾ ಮುಂದಾಗಿದೆ. ರೆಮ್​ಡೆಸಿವಿರ್ ಸಿಪ್ರೆಮಿಯ ಪ್ರತಿ 100 ಮಿ.ಗ್ರಾಂ ಬಾಟಲ್ 4,000 ರೂ.ಗೆ ಲಭಿಸಲಿದೆ.

remdesivir
remdesivir

ನವದೆಹಲಿ:ಫಾರ್ಮಾ ಕಂಪನಿ ಸಿಪ್ಲಾ ತನ್ನ ಆ್ಯಂಟಿವೈರಲ್ ಡ್ರಗ್ ರೆಮ್​ಡೆಸಿವಿರ್​ನ ಸಾಮಾನ್ಯ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು 4,000 ರೂ.ಗೆ ಲಭ್ಯವಾಗಲಿದೆ.

ಜಾಗತಿಕವಾಗಿ ಇದು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗಲಿದ್ದು, ಮೊದಲ ತಿಂಗಳಲ್ಲಿ 80,000 ಬಾಟಲಿಗಳನ್ನು ಪೂರೈಸಲು ಕಂಪನಿ ಮುಂದಾಗಿದೆ. ರೆಮ್​ಡೆಸಿವಿರ್ ಸಿಪ್ರೆಮಿಯ ಪ್ರತಿ 100 ಮಿ.ಗ್ರಾಂ ಬಾಟಲಿಗೆ 4,000 ರೂ. ಎಂದು ಸಿಪ್ಲಾ ಹೇಳಿಕೆಯಲ್ಲಿ ತಿಳಿಸಿದೆ.

ವಾಣಿಜ್ಯಿಕವಾಗಿ ಸಿಪ್ರೆಮಿಯನ್ನು ಪ್ರಾರಂಭಿಸಲು ನಾವು ಹೆಮ್ಮೆಪಡುತ್ತೇವೆ. ಜಾಗತಿಕವಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭಿಸಲಿದೆ. ಮೊದಲ ತಿಂಗಳಲ್ಲಿ 80,000 ಬಾಟಲಿಗಳನ್ನು ಪೂರೈಸುವ ಗುರಿ ಹೊಂದಿದ್ದೇವೆ ಎಂದು ಸಿಪ್ಲಾ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಸಿಇಒ ನಿಖಿಲ್ ಚೋಪ್ರಾ ಹೇಳಿದ್ದಾರೆ.

ABOUT THE AUTHOR

...view details