ಬೀಜಿಂಗ್: ಹುನಾನ್ ಪ್ರಾಂತ್ಯದಲ್ಲಿ ಮಾರಣಾಂತಿಕ ಹಕ್ಕಿ ಜ್ವರವಿದ್ದು ಇದರಿಂದಲೇ ಕೊರೊನಾ ವೈರಸ್ ಹರಡಿರಬಹುದೆಂದು ವರದಿಯೊಂದು ಹೇಳುತ್ತಿದೆ.
ಚೀನಾದ ಶುವಾಂಗ್ಕಿಂಗ್ ಜಿಲ್ಲೆಯ ಹುಬೈನ ಪ್ರಾಂತ್ಯದ ಜಮೀನಿನಲ್ಲಿ ಅಪಾರ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಅಲ್ಲಿ ಸುಮಾರು 17,828 ಕೋಳಿಗಳಿದ್ದವು. ಅವುಗಳಲ್ಲಿ 4,500 ಕೋಳಿಗಳಿಗೆ ಸಾಂಕ್ರಾಮಿಕ ರೋಗ ತಗುಲಿ ಸಾವನ್ನಪ್ಪಿವೆ. ಈ ಕೋಳಿಗಳೇ ಕೊರೊನಾ ವೈರಸ್ನ ಕೇಂದ್ರಬಿಂದು ಎಂದು ಚೀನಾದಲ್ಲಿ ಖಾಸಗಿ ಸಂಸ್ಥೆಯೊಂದು ನಡೆಸಿದ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳೀಯ ಅಧಿಕಾರಿಗಳು ರೋಗಬಾಧಿತ ಎಲ್ಲ ಕೋಳಿಗಳನ್ನು ಪರೀಕ್ಷಿಸುತ್ತಿದ್ದಾರೆ. ಅಲ್ಲಿ ನಡೆದಿರುವ ಕೋಳಿಗಳ ಮಾರಣಹೋಮವೇ ಕೊರೊನಾ ವೈರಸ್ ಉದ್ಭವಿಸಲು ಕಾರಣ. ಆದ್ರೆ ಹುನಾನ್ ನಗರದಲ್ಲಿ ಮನುಷ್ಯರಲ್ಲಿ ಯಾವುದೇ ಎಚ್5ಎನ್1 ವೈರಸ್ ಪ್ರಕರಣಗಳು ವರದಿಯಾಗಿಲ್ಲ ಎಂದು ಚೀನಾದ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಸ್ಷಷ್ಟಪಡಿಸಿದೆ.
ಚೀನಾದಲ್ಲಿ ಕೊರೊನಾ ವೈರಸ್ನಿಂದ ಇಲ್ಲಿಯವರೆಗೆ ಸುಮಾರು 304 ಜನರು ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾ, ಫ್ರಾನ್ಸ್, ಅಮೆರಿಕ ಮತ್ತು ಚೀನಾ ಹೊರತಾಗಿ ಏಷ್ಯಾದ ಏಳು ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ.