ಕರ್ನಾಟಕ

karnataka

ETV Bharat / bharat

ಸುಪ್ರೀಂಕೋರ್ಟ್​ ಕದ ತಟ್ಟಿದ ಚಿದಂಬರಂ... ಶೀಘ್ರ ವಿಚಾರಣೆಗೆ ಮನವಿ

ದೆಹಲಿ ಹೈಕೋರ್ಟ್​ನಲ್ಲಿ ಕೆಲ ದಿನಗಳ ಹಿಂದೆ ಚಿದಂಬರಂ ಜಾಮೀನು ಅರ್ಜಿ ವಜಾಗೊಂಡಿತ್ತು. ಅರ್ಜಿದಾರ ಪ್ರಮುಖ ರಾಜಕಾರಣಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ದೆಹಲಿ ಹೈಕೋರ್ಟ್​ ಜಾಮೀನು ನೀಡಲು ನಿರಾಕರಿಸಿತ್ತು.

ಸುಪ್ರೀಂಕೋರ್ಟ್​ ಕದ ತಟ್ಟಿದ ಚಿದಂಬರಂ

By

Published : Oct 3, 2019, 12:00 PM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸದ್ಯ ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

ಚಿದು ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಎನ್​.ವಿ ರಮಣ ನೇತೃತ್ವದ ಪೀಠಕ್ಕೆ ತುರ್ತು ವಿಚಾರಣೆಗೆ ಮನವಿ ಮಾಡಿಕೊಂಡಿದ್ದಾರೆ. ಸೋಮವಾರದಿಂದ ದಸರಾ ನಿಮಿತ್ತ ಕೋರ್ಟ್​ ಕಲಾಪಗಳಿಗೆ ರಜೆ ಇರುವುದರಿಂದ ಶೀಘ್ರ ವಿಚಾರಣೆ ಅಗತ್ಯವಿದೆ ಎಂದು ಸಿಬಲ್ ಪೀಠಕ್ಕೆ ಮನವರಿಕೆ ಮಾಡಿದ್ದಾರೆ. ಆದರೆ ಈ ಮನವಿಯನ್ನು ಪುರಸ್ಕರಿಸುವ ಅಧಿಕಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮಾತ್ರ ಹೊಂದಿದ್ದಾರೆ.

ಐಎನ್​ಎಕ್ಸ್​ ಮೀಡಿಯಾ ಕೇಸ್​... 'ಕೈ' ಮಾಜಿ ಸಚಿವ ಚಿದಂಬರಂಗಿಲ್ಲ ಜಾಮೀನು!

ಎನ್​.ವಿ.ರಮಣ ನೇತೃತ್ವದ ಪೀಠದಲ್ಲಿ ಸಂಜೀವ್ ಖನ್ನಾ ಹಾಗೂ ಕೃಷ್ಣ ಮುರಾರಿ ಸದಸ್ಯರಾಗಿದ್ದಾರೆ. ತುರ್ತು ವಿಚಾರಣೆಗೆ ಮನವಿ ಮಾಡಿರುವುದರಿಂದ ಮುಖ್ಯ ನ್ಯಾಯಮೂರ್ತಿಯ ಆದೇಶದಂತೆ ಅರ್ಜಿ ವಿಚಾರಣೆಯನ್ನು ಈ ಪೀಠ ಕೈಗೆತ್ತಿಕೊಳ್ಳಲಿದೆ.

ದೆಹಲಿ ಹೈಕೋರ್ಟ್​ನಲ್ಲಿ ಸೆ.30ರಂದು ಚಿದಂಬರಂ ಜಾಮೀನು ಅರ್ಜಿ ವಜಾಗೊಂಡಿತ್ತು. ಅರ್ಜಿದಾರ ಪ್ರಮುಖ ರಾಜಕಾರಣಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ದೆಹಲಿ ಹೈಕೋರ್ಟ್​ ಜಾಮೀನು ನೀಡಲು ನಿರಾಕರಿಸಿತ್ತು.

ABOUT THE AUTHOR

...view details