ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢ: ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಗ್ರಾಮಗಳಾವುವು ಗೊತ್ತೆ? - ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಗ್ರಾಮಗಳು

ಹಲವಾರು ವರ್ಷಗಳಿಂದ ಭಯೋತ್ಪಾದಕರು ಛತ್ತೀಸ್​ಗಢದ ಕೆಲವು ಹಳ್ಳಿಗಳಲ್ಲಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವವನ್ನು ಬಹಿಷ್ಕರಿಸಿ, ಬದಲಿಗೆ ಕಪ್ಪು ಧ್ವಜಗಳನ್ನು ಹಾರಿಸುತ್ತಿದ್ದರು. ಆದರೆ ಇತ್ತೀಚೆಗೆ ಕಳೆದ ಕೆಲ ವರ್ಷಗಳಲ್ಲಿ ಸ್ಥಳೀಯರು ನಕ್ಸಲ್ ಬೆದರಿಕೆಯನ್ನು ಎದುರಿಸಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಗ್ರಾಮಗಳ ಕುರಿತು ಇಲ್ಲಿದೆ ಮಾಹಿತಿ.

ತ್ರಿವರ್ಣ ಧ್ವಜ
ತ್ರಿವರ್ಣ ಧ್ವಜ

By

Published : Jan 25, 2021, 8:30 PM IST

ಛತ್ತೀಸ್​ಗಢ: ಒಂದು ಕಾಲದಲ್ಲಿ ನಕ್ಸಲರ ಬೆದರಿಕೆಗೆ ಒಳಗಾಗಿದ್ದ ಛತ್ತೀಸ್​ಗಢದ ಬಸ್ತಾರ್ ವಿಭಾಗದ ನೂರಾರು ಹಳ್ಳಿಗಳಲ್ಲಿ ಇದೀಗ ಬದಲಾವಣೆಯ ಗಾಳಿ ಬೀಸಲು ಪ್ರಾರಂಭಿಸಿದೆ.

ಹಲವಾರು ವರ್ಷಗಳಿಂದ ಭಯೋತ್ಪಾದಕರು ಛತ್ತೀಸ್​ಗಢದ ಕೆಲವು ಹಳ್ಳಿಗಳಲ್ಲಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವವನ್ನು ಬಹಿಷ್ಕರಿಸಿ, ಕಪ್ಪು ಧ್ವಜಗಳನ್ನು ಹಾರಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯರು ನಕ್ಸಲ್ ಬೆದರಿಕೆಯನ್ನು ಎದುರಿಸಿ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಗ್ರಾಮಗಳು:

2016: ಸುಕ್ಮಾ ಜಿಲ್ಲೆಯ ಗೊಂಪಾಡ್‌ನಲ್ಲಿ ಆಗಸ್ಟ್ 15, 2016 ರಂದು ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಲಾಯಿತು.

2017: ಸ್ವಾತಂತ್ರ್ಯ ದಿನಾಚರಣೆಯಂದು ಬಸ್ತಾರ್ ಜಿಲ್ಲೆಯ ಮುಂಡಗರ್ ಹಾಗೂ ಚಂದಮೆಟದಲ್ಲಿ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸಲಾಯಿತು.

2019: ಪಹರ್ನಾರ್, ಚಿಂದನಾರ್ ಗಡಿ, ಪಾಲ್ಮದುಗು, ಗೊಗುಂಡಾ ಮತ್ತು ಮೆಟಮಾರ್ಕಾ ಗ್ರಾಮಗಳಲ್ಲಿ ತ್ರಿವರ್ಣವನ್ನು ಮೊದಲ ಬಾರಿಗೆ ಹಾರಿಸಲಾಯಿತು. ಸಿಆರ್‌ಪಿಎಫ್‌ನ 206 ಬೆಟಾಲಿಯನ್​ನೊಂದಿಗೆ ಗ್ರಾಮಸ್ಥರೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸಿದರು.

2019: ಜೂನ್ 13, 2019 ರಂದು ಕೊಂಟಾದ ಹೊಸ ಸಿಆರ್‌ಪಿಎಫ್ ಶಿಬಿರದಲ್ಲಿ 100 ಅಡಿ ಎತ್ತರದ ಧ್ವಜವನ್ನು ಹಾರಿಸಲಾಯಿತು.

2020: ಜನವರಿ 26, 2020 ರಂದು ಬಸ್ತಾರ್‌ನ 12 ಹಳ್ಳಿಗಳಲ್ಲಿ ತ್ರಿವರ್ಣವನ್ನು ಹಾರಿಸಲಾಯಿತು. ಕಾಡೆಮೆಟಾ (ನಾರಾಯಣಪುರ), ಬೊಡ್ಲಿ (ಬಸ್ತಾರ್), ಕುನ್ನಾ-ಡಬ್ಬಾ (ಸುಕ್ಮಾ) ಮತ್ತು ದುತಾ (ಕಾಂಕರ್) ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಧ್ವಜವನ್ನು ಹಾರಿಸಲಾಯಿತು ಮತ್ತು ದಂತೇವಾಡಾದ ಪೊಟಾಲಿ ಗ್ರಾಮದಲ್ಲಿ 20 ವರ್ಷಗಳ ನಂತರ ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಹಾರಿಸಲಾಯಿತು.

2020: ಚಿಂಟಗುಫಾದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಕುಶಲ್ಪಡ, ಮಾರ್ಜೂಮ್, ಚಿಕ್ಪಾಲ್ ಮತ್ತು ಪಾರ್ಚೆಲಿ ಗ್ರಾಮಗಳಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ABOUT THE AUTHOR

...view details