ಛತ್ತೀಸ್ಗಢ:ಭದ್ರತಾ ಸಿಬ್ಬಂದಿ ಮೇಲೆ ನಕ್ಸಲರು ಗುಂಡು ಹಾರಿಸಿದ ಪರಿಣಾಮ ಓರ್ವ ಸಿಎಎಫ್ ಯೋಧ ಹುತಾತ್ಮನಾಗಿರುವ ಘಟನೆ ಛತ್ತೀಸ್ಘಡದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.
ನಕ್ಸಲ್ ದಾಳಿಗೆ ಸಿಎಎಫ್ ಯೋಧ ಹುತಾತ್ಮ - ಛತ್ತೀಸ್ಗಢ ಸಶಸ್ತ್ರ ಪಡೆ
ನಕ್ಸಲ್ ದಾಳಿಗೆ ಛತ್ತೀಸ್ಘಡ ಸಶಸ್ತ್ರ ಪಡೆಯ 22ನೇ ಬೆಟಾಲಿಯನ್‌ನ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ.
ನಕ್ಸಲ್ ದಾಳಿಗೆ ಸಿಎಎಫ್ ಯೋಧ ಹುತಾತ್ಮ
ನಾರಾಯಣಪುರದ ಅರಣ್ಯ ಪ್ರದೇಶದಲ್ಲಿ ಕಡೆಮೇಟಾ ಶಿಬಿರದಲ್ಲಿ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿರುವ ವೇಳೆ ಬೆಳಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಬಸ್ತಾರ್ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪಿ.ಸುಂದರರಾಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಛತ್ತೀಸ್ಘಡ ಸಶಸ್ತ್ರ ಪಡೆಯ 22ನೇ ಬೆಟಾಲಿಯನ್‌ನ ಕಾನ್ಸ್ಟೇಬಲ್ ಜಿತೇಂದ್ರ ಬಕ್ಡೆ ಮೃತ ಸಿಬ್ಬಂದಿ. ಕೃತ್ಯ ಎಸಗಿದ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.