ನವದೆಹಲಿ:ಔಷಧಿ ಅಂಗಡಿಗಳ ಮೇಲಿನ ಕೆಮಿಸ್ಟ್ಸ್ ಆ್ಯಂಡ್ ಡ್ರಗಿಸ್ಟ್ ಎಂಬ ಹೆಸರುಗಳನ್ನು ಬದಲಾಯಿಸಿ ಇನ್ನು ಮುಂದೆ 'ಫಾರ್ಮಸಿ' ಎಂದಾಗಿ ಸರ್ಕಾರದ ಔಷಧಿ ಉತ್ಪನ್ನಗಳ ಉನ್ನತ ಮಂಡಳಿಯ ಆದೇಶದ ಅನ್ವಯ ಬದಲಿಸಬೇಕಿದೆ.
ವಿವಿಧ ರೀತಿಯ ಹೆಸರಗುಳನ್ನು ಬಳಸುತ್ತಿರುವ ಔಷಧಿ ಅಂಗಡಿಗಳಿಗೆ ಏಕರೂಪತೆ ತರುವ ಅಗತ್ಯವಿದೆ. ವಿಶ್ವದಲ್ಲೇ ಅತಿಹೆಚ್ಚಾಗಿ ಬಳಕೆಯಲ್ಲಿರು 'ಫಾರ್ಮಸಿ' ಎಂಬ ಪದವನ್ನು ಬಳಸಲು ನಿರ್ಧರಿಸಲಾಗಿದೆ. ಡ್ರಗ್ ಮತ್ತು ತಾಂತ್ರಿಕ ಸಲಹಾ ಮಂಡಳಿ (ಡಿಟಿಎಂಬಿ) ಸಹ ಅಂಗಡಿಗಳ ಮೇಲಿನ ಹೆಸರು ಬದಲಾಯಿಸಲು ಅನುಮೋದನೆ ನೀಡಿದೆ ಎಂದು ಭಾರತ ಔಷಧ ನಿಯಂತ್ರಣದ ಜನರಲ್ ಡಾ.ಎಸ್. ಈಶ್ವರ್ ರೆಡ್ಡಿ ತಿಳಿಸಿದ್ದಾರೆ.