ಕರ್ನಾಟಕ

karnataka

ETV Bharat / bharat

​​​​​​​ಚಂದ್ರಯಾನ-1, 2 ಮಿಷನ್‌ನ ನಮ್ಮ ಹೆಮ್ಮೆಯ ವಿಜ್ಞಾನಿ ಭಾರತೀಯರೇ ಅಲ್ವಂತೆ! ಹಾಗಾದ್ರೇ, ದೇಶಬಿಡ್ತಾರಾ?

ಡಾ. ಜಿತೇಂದ್ರನಾಥ ಗೋಸ್ವಾಮಿ. ಭಾರತದ ಹೆಮ್ಮೆಯ ವಿಜ್ಞಾನಿ. ಚಂದ್ರಯಾನ-1 ಮಿಷನ್‌ನಲ್ಲಿ ಇಸ್ರೋ ತಂಡ ಮುನ್ನಡೆಸಿದ್ದವರು. ಮಂಗಳಯಾನ ಮತ್ತು ಚಂದ್ರಯಾನ-2ನಲ್ಲೂ ಕೂಡ ಮಹತ್ವದ ಪಾತ್ರ ನಿರ್ವಹಿಸಿದ್ದರು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಅಸ್ಸೋಂನ ಜೋರ್ಹಾಟ್‌ ನಿವಾಸಿಯಾದ ಇವರು ಈಗ ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನಲ್ಲಿ ನೆಲೆಸಿದಾರೆ.

ಡಾ. ಜಿತೇಂದ್ರನಾಥ ಗೋಸ್ವಾಮಿ

By

Published : Sep 8, 2019, 1:53 PM IST

ಜೋರ್ಹಾಟ್‌, (ಅಸ್ಸೋಂ):ಚಂದ್ರಯಾನ-2 ಮಿಷನ್‌ನಿಂದಾಗಿ ಇಡೀ ದೇಶವೇ ಹೆಮ್ಮೆಪಡ್ತಿದೆ. ಜಗತ್ತು ಇಸ್ರೋದತ್ತಲೇ ಕಣ್ಣೆತ್ತಿ ನೋಡುವಂತೆ ಮಾಡಿರೋ ಚಂದ್ರಯಾನ-2 ಮಿಷನ್‌ನಲ್ಲಿ ಮಾರ್ಗದರ್ಶಕರಾಗಿದ್ದ ಖ್ಯಾತ ಭಾರತೀಯ ವಿಜ್ಞಾನಿ ಇನ್ಮೇಲೆ ಪಾರಾಗುವ ಭೀತಿಯಲ್ಲಿದ್ದಾರೆೆ. ಅಷ್ಟಕ್ಕೂ ಆ ವಿಜ್ಞಾನಿ ಅಂತಹ ತಪ್ಪು ಏನು ಮಾಡಿದ್ದಾರೆ ಅನ್ನೋ ಪ್ರಶ್ನೆ ಏಳುತ್ತಲ್ವೇ.. ಅದಕ್ಕೆ ಕಾರಣವೇ ಎನ್‌ಆರ್‌ಸಿ.

ಮಂಗಳಯಾನ, ಚಂದ್ರಯಾನ್‌ 1+2ರಲ್ಲೂ ಮುಂಚೂಣಿಯಲ್ಲಿದ್ದ ವಿಜ್ಞಾನಿ!

ಡಾ. ಜಿತೇಂದ್ರನಾಥ ಗೋಸ್ವಾಮಿ. ಭಾರತದ ಹೆಮ್ಮೆಯ ವಿಜ್ಞಾನಿ. ಚಂದ್ರಯಾನ-1 ಮಿಷನ್‌ನಲ್ಲಿ ಇಸ್ರೋ ತಂಡ ಮುನ್ನಡೆಸಿದ್ದವರು. ಮಂಗಳಯಾನ ಮತ್ತು ಚಂದ್ರಯಾನ-2ನಲ್ಲೂ ಕೂಡ ಮಹತ್ವದ ಪಾತ್ರ ನಿರ್ವಹಿಸಿದ್ದರು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಅಸ್ಸೋಂನ ಜೋರ್ಹಾಟ್‌ ನಿವಾಸಿಯಾದ ಇವರು ಈಗ ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನಲ್ಲಿ ನೆಲೆಸಿದಾರೆ. 68 ವರ್ಷದ ಡಾ. ಗೋಸ್ವಾಮಿ ಅಸ್ಸೋಂನ ರಾಷ್ಟ್ರೀಯ ನಾಗರಿಕ ನೋಂದಣಿ (NRC) ಪಟ್ಟಿಯಿಂದ ಹೊರಗುಳಿದಿದಾರೆ. ಅಗಸ್ಟ್‌ 31ರಂದು ಎನ್ಆರ್‌ಸಿ ಫೈನಲ್‌ ಲಿಸ್ಟ್‌ ಪ್ರಕಟವಾಗಿದೆ. ಆದರೆ, ಅದರಲ್ಲಿ ಈ ಮಹಾನ್‌ ವಿಜ್ಞಾನಿ ಹೆಸರನ್ನ ಕೈಬಿಡಲಾಗಿದೆ. ಅಂದ್ರೇ ಎನ್ಆರ್‌ಸಿ ಹೇಳುವಂತೆ ಈ ಖ್ಯಾತ ವಿಜ್ಞಾನಿ ಭಾರತೀಯರೇ ಅಲ್ವಂತೆ.

ಡಾ. ಜಿತೇಂದ್ರನಾಥ ಗೋಸ್ವಾಮಿ

'ನಾವು ಅಹಮದಾಬಾದ್‌ನಲ್ಲಿ ಕಳೆದ 20 ವರ್ಷದಿಂದ ವಾಸವಾಗಿದ್ದೇವೆ. ಬಹುಷ್ಯ ಅವಶ್ಯಕ ದಾಖಲೆಗಳು ಹೊಂದಿಲ್ಲದ ಕಾರಣ ಎನ್ಆರ್‌ಸಿ ಪಟ್ಟಿಗೆ ಸೇರದೇ ಇರಬಹುದೇನೋ. ಆದರೆ, ನಮ್ಮ ಕುಟುಂಬ ಈಗಲೂ ಅಸ್ಸೋಂನಲ್ಲಿದೆ. ಜೋರ್ಹಾಟ್‌ನಲ್ಲಿ ನಾವು ಕೃಷಿ ಭೂಮಿ ಕೂಡ ಹೊಂದಿದ್ದೇವೆ. ಭವಿಷ್ಯದಲ್ಲಿ ಏನಾದರೂ ಸಮಸ್ಯೆಯಾದ್ರೇ ನಾವು ಹೊಂದಿರುವ ಭೂಮಿ ಬಗೆಗಿನ ದಾಖಲೆಗಳನ್ನೂ ನೀಡೋದಕ್ಕೆ ಸಿದ್ಧರಿದ್ದೇವೆ' ಅಂತಾ ಡಾ. ಗೋಸ್ವಾಮಿ ಹೇಳಿಕೊಂಡಿದ್ದಾರೆ. 19 ಲಕ್ಷಕ್ಕೂ ಅಧಿಕ ಮಂದಿ ಎನ್ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಯಾರು ಪಟ್ಟಿಯಿಂದ ಹೊರಗುಳಿದಿದ್ದಾರೋ ಅವರು ವಿದೇಶಿ ನ್ಯಾಯಾಧಿಕರಣದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಬಹುದು ಅಂತಾ ಅಸ್ಸೋಂ ಎನ್‌ಆರ್‌ಸಿಯ ಸಂಯೋಜಕ ಪ್ರತೀಕ್ ಹಜೇಲಾ ಹೇಳಿದ್ದಾರೆ. ರಾಜ್ಯದ ನಿವಾಸಿಗಳೇ ಅಲ್ಲ ಅಂತಾ ಯಾರು ಪರಿಗಣಿಸಲ್ಪಟ್ಟಿದ್ದಾರೋ ಅವರಿಗೀಗ ಮುಂದೇನು ಅನ್ನೋ ಚಿಂತೆ ಕಾಡುತ್ತಿದೆ.

ಡಾ. ಜಿತೇಂದ್ರನಾಥ್ ಗೋಸ್ವಾಮಿ ಮತ್ತು ಅಸ್ಸೋಂ ಬಾಂಧವ್ಯ!
ಚಂದ್ರಯಾನ-2 ಯೋಜನೆ ಹಿಂದೆ ಕೆಲಸದ ಮಾಡಿದ ಡಾ.ಜಿತೇಂದ್ರನಾಥ್ ಗೋಸ್ವಾಮಿ, ಅಸ್ಸೋಂನ ಜೋರ್ಹಾಟ್‌ ಜಿಲ್ಲೆ ಬೋರ್ಬೆಟಾದ ನಿವಾಸಿ. ಅಸ್ಸೋಂ ವಿಧಾನಸಭಾ ಸ್ಪೀಕರ್​​ ಹಿತೇಂದ್ರನಾಥ್​ ಗೋಸ್ವಾಮಿ ಹಿರಿಯಣ್ಣ ಈ ಜಿತೇಂದ್ರಾನಾಥ್​. ಪ್ರಾಥಮಿಕ ಶಿಕ್ಷಣ ಬೊರ್ಬೆಟಾ ಪಬ್ಲಿಕ್ ಸ್ಕೂಲ್​ನಲ್ಲಿ ಪೂರೈಸಿದ ಬಳಿಕ ಜೋರ್ಹಾಟ್‌​ನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಂದಿನ ಶಿಕ್ಷಣ ಪಡೆದಿದ್ದರು. ಸಂಬಂಧಿಕರ ಮನೆಯಿಂದ ಶಾಲೆಗೆ ತೆರಳುತ್ತಿದ್ದ ಜಿತೇಂದ್ರನಾಥ್, ಪಾಠದ ಜತೆ ಪಠ್ಯೇತರ ಚಟುವಟಿಕೆಯಲ್ಲೂ ಸದಾ ಮುಂದಿದ್ದರಂತೆ. ಚಂದ್ರಯಾನ 1 ಮತ್ತು 2ರ ಯೋಜನೆಯಲ್ಲಿ ಮಹತ್ವದ ಪಾತ್ರವಹಿಸಿರೋದಕ್ಕೆ ಮನೆಯವರು ಹಾಗೂ ಸಂಬಂಧಿಕರು ಅತ್ಯಂತ ಖುಷಿಯಾಗಿದ್ದರು. ಜಿತೇಂದ್ರನಾಥ್​ ಓದಿರುವ ಶಾಲೆಯ ಶಿಕ್ಷಕರು, ಆತ ಅಸ್ಸೋಂನ ಪುತ್ರ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಡಾ. ಜಿತೇಂದ್ರನಾಥ ಗೋಸ್ವಾಮಿ

20 ವರ್ಷದಿಂದ ಗುಜರಾತ್‌ನಲ್ಲಿ ನೆಲೆಸಿರುವ ಡಾ. ಜಿತೇಂದ್ರ ಗೋಸ್ವಾಮಿ!
ವಿಜ್ಞಾನಿ ಜಿತೇಂದ್ರನಾಥ್‌ ಮತ್ತು ಅವರ ಕುಟುಂಬ ಸದಸ್ಯರು ಎನ್ಆರ್‌ಸಿ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಹಾಕಿರಲಿಲ್ಲ. ಈಗ ಗುಜರಾತ್‌ನ ಅಹಮದಾಬಾದ್‌ನಲ್ಲಿ 20 ವರ್ಷದಿಂದ ನೆಲೆಸಿದ್ದಾರೆ. ಅಲ್ಲಿನ ಖಾಯಂ ನಿವಾಸಿಯಾಗಿದ್ದು, ಅಲ್ಲೇ ಮತದಾನದ ಹಕ್ಕು ಹೊಂದಿದ್ದಾರೆ. ಎನ್ಆರ್‌ಸಿಗೆ ಅರ್ಜಿ ಸಲ್ಲಿಸಲು ನನ್ನ ಸೋದರ ಆಸಕ್ತಿ ತೋರಿಸಿರಲಿಲ್ಲ. ಜೋರ್ಹಾತ್‌ನಲ್ಲಿ ಆತ ಆಸ್ತಿ ಕೂಡ ಹೊಂದಿದ್ದಾರೆ ಅಂತಾ ಡಾ. ಜಿತೇಂದ್ರ ನಾಥ್‌ ಸೋದರ್‌ ಸ್ಪೀಕರ್‌ ಹಿತೇಂದ್ರ ಗೋಸ್ವಾಮಿ ಹೇಳಿದ್ದಾರೆ. ಆದರೆ, ವಿಜ್ಞಾನಿ ಜಿತೇಂದ್ರನಾಥ್‌ ಗೋಸ್ವಾಮಿ ಈಗ ಮುಂದೇನ್ಮಾಡ್ತಾರೆ ಅನ್ನೋ ಕುತೂಹಲವೂ ಇದೆ.

ABOUT THE AUTHOR

...view details