ಕರ್ನಾಟಕ

karnataka

ETV Bharat / bharat

ಚಂದ್ರನಿಗೆ ಮತ್ತಷ್ಟು ಸನಿಹವಾಯ್ತು ಚಂದ್ರಯಾನ ನೌಕೆ..!

ಮಂಗಳವಾರ ಹಾಗೂ ಬುಧವಾರ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಲಾಗಿದ್ದು, ಆಗಸ್ಟ್ 28ರಂದು ಮುಂದಿನ ಹಂತ ನಡೆಯಲಿದೆ.

ಚಂದ್ರಯಾನ

By

Published : Aug 21, 2019, 3:25 PM IST

ನವದೆಹಲಿ:ಇಸ್ರೋ ಮೂನ್ ಮಿಷನ್ ಚಂದ್ರಯಾನ -2 ತನ್ನ ಗುರಿಯತ್ತ ಸ್ಪಷ್ಟವಾಗಿ ಸಾಗುತ್ತಿದ್ದು, ಇಂದು ಮತ್ತೊಮ್ಮೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ.

ಮಂಗಳವಾರ ಬೆಳಗ್ಗೆ 9.20 ಗಂಟೆಗೆ ಚಂದ್ರನ ಕಕ್ಷೆಗೆ ಸೇರಿಸಿದ್ದ ಇಸ್ರೋ ವಿಜ್ಞಾನಿಗಳ ತಂಡ ಇಂದು ಮತ್ತೊಮ್ಮೆ ಕಕ್ಷೆಗೆ ಸೇರಿಸುವ ಕಾರ್ಯ ಮಾಡಿದ್ದು, ಈ ಮೂಲಕ ಚಂದ್ರಯಾನ ನೌಕೆ ಚಂದ್ರನಿಗೆ ಮತ್ತಷ್ಟು ಸಮೀಪವಾಗಿದೆ.

ಚಂದ್ರನ ವಾತಾವರಣ ಹಾಗೂ ನೀರಿನಂಶ ಪತ್ತೆಯೇ ಇಸ್ರೋದ ಮೊದಲ ಆದ್ಯತೆ: ಸಿವನ್​ ಘೋಷಣೆ

ಮಂಗಳವಾರ ಹಾಗೂ ಬುಧವಾರ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಲಾಗಿದ್ದು, ಆಗಸ್ಟ್ 28ರಂದು ಮುಂದಿನ ಹಂತದ ಕಾರ್ಯಗಳು ನಡೆಯಲಿದೆ.

ಇಂದಿನ ಹಂತ ಯಶಸ್ವಿಯಾಗುತ್ತಿದ್ದಂತೆ ನಮ್ಮ ನೌಕೆ ಚಂದ್ರನಿಗೆ ಮತ್ತಷ್ಟು ಸನಿಹವಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಈ ಬಹುನಿರೀಕ್ಷಿತ ನೌಕೆ ಸೆಪ್ಟೆಂಬರ್ 7ರ ತಡರಾತ್ರಿ 1.40ರಿಂದ 1.55ರ ಅವಧಿಯಲ್ಲಿ ಚಂದ್ರನಲ್ಲಿ ಸುರಕ್ಷಿತವಾಗಿ ಇಳಿಯಲಿದೆ.

ABOUT THE AUTHOR

...view details