ಕರ್ನಾಟಕ

karnataka

ETV Bharat / bharat

ಕೇಂದ್ರದ ಒತ್ತಡ ಹಾಗೂ ಹಣ ಬಳಸಿ ರಾಜಸ್ಥಾನ ಸರ್ಕಾರ ಉರುಳಿಸಲು ಬಿಜೆಪಿ ಯತ್ನ : ಶಿವಸೇನೆ - ಶಿವಸೇನೆ ಆರೋಪ

ರಾಜಸ್ಥಾನದಲ್ಲಿ ಬಹುಮತದ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕಾಗಿ ಹೆಚ್ಚಿನ ಬೆಲೆಗೆ ಶಾಸಕರ ಮಾರಾಟವೂ ಪ್ರಾರಂಭವಾಗಿದೆ ಎಂದು ಶಿವಸೇನೆ ಬಿಜೆಪಿಯ ಮೇಲೆ ಆರೋಪ ಹೊರಿಸಿದೆ.

shivasena
ಶಿವಸೇನೆ

By

Published : Jul 20, 2020, 3:38 PM IST

ಮುಂಬೈ :ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಕೇಂದ್ರದ ಒತ್ತಡ ಮತ್ತು ಹಣವನ್ನು ಬಳಸಲಾಗಿದೆಯೆಂದು ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಕುರಿತು ಶಿವಸೇನೆ ಕೇಂದ್ರ ಸರ್ಕಾರವನ್ನು ದೂಷಿಸಿದೆ.

ಆದರೆ, ಕೇಂದ್ರ ಸರ್ಕಾರದ ಪ್ರಯತ್ನವನ್ನು ಕಾಂಗ್ರೆಸ್ ನಾಶಪಡಿಸಿದೆ. ಈಗ ರಾಜಸ್ಥಾನ ಸರ್ಕಾರ ಅನೈತಿಕ ರೀತಿ ಫೋನ್​ ಟ್ಯಾಪ್ ಮಾಡಿದೆ ಎಂದು ಬಿಜೆಪಿ ಹೇಳುತ್ತದೆ ಎಂದು ಶಿವಸೇನೆ ಹೇಳಿದೆ.

ರಾಜಸ್ಥಾನದಲ್ಲಿ ಬಹುಮತದ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಹೆಚ್ಚಿನ ಬೆಲೆಗೆ ಶಾಸಕರ ಮಾರಾಟವೂ ಪ್ರಾರಂಭವಾಗಿದೆ ಎಂದು ಶಿವಸೇನೆ ಆರೋಪಿಸಿದೆ.

"ಸಚಿನ್ ಪೈಲಟ್ ಅವರ ದಂಗೆಯ ಹಿಂದಿನ ಕಾರಣವೇ ಬಿಜೆಪಿ. ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಸಾಕ್ಷ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಿದೆ"ಎಂದು ಶಿವಸೇನೆ ಹೇಳಿದೆ.

ABOUT THE AUTHOR

...view details