ಕರ್ನಾಟಕ

karnataka

ETV Bharat / bharat

ಸಾಫ್ಟ್‌ವೇರ್ ಟೆಕ್ ಪಾರ್ಕ್‌ಗಳಿಂದ ಕಾರ್ಯನಿರ್ವಹಿಸುತ್ತಿರುವ ಐಟಿ ಕಂಪನಿಗಳ ಬಾಡಿಗೆ ಮನ್ನಾ

ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದಿಂದ (ಎಸ್‌ಟಿಪಿಐ) ಕಾರ್ಯನಿರ್ವಹಿಸುತ್ತಿರುವ ಸಣ್ಣ ಐಟಿ ಘಟಕಗಳಿಗೆ ಬಾಡಿಗೆ ಮನ್ನಾ ಮಾಡುವುದಾಗಿ ಕೇಂದ್ರ ಘೋಷಿಸಿದೆ.

Centre gives 4-month rental waiver to IT firms
ಐಟಿ ಕಂಪನಿಗಳ 4 ತಿಂಗಳ ಬಾಡಿಗೆ ಮನ್ನಾ

By

Published : Apr 17, 2020, 11:33 AM IST

ನವದೆಹಲಿ: ಕೊರೊನಾ ಸೋಂಕಿನಿಂದ ದೇಶವೇ ಸ್ತಬ್ಧವಾಗಿದ್ದು, ಆರ್ಥಿಕ ಕುಸಿತದ ಮಧ್ಯೆ ಐಟಿ ಕ್ಷೇತ್ರಕ್ಕೆ ಬಿಡುವು ನೀಡಿರುವ ಹಿನ್ನೆಲೆ, ಕೇಂದ್ರವು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದಿಂದ (ಎಸ್‌ಟಿಪಿಐ) ಕಾರ್ಯನಿರ್ವಹಿಸುತ್ತಿರುವ ಸಣ್ಣ ಐಟಿ ಘಟಕಗಳಿಗೆ ಬಾಡಿಗೆ ಮನ್ನಾ ಮಾಡುವುದಾಗಿ ಘೋಷಿಸಿದೆ.

ಈ ಘಟಕಗಳಲ್ಲಿ ಹೆಚ್ಚಿನವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಟೆಕ್ ಸ್ಪೇಸ್ ಅಥವಾ ಸ್ಟಾರ್ಟ್ಅಪ್‌ಗಳಾಗಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಸುಮಾರು 200 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇದರ ಪ್ರಯೋಜನಸಿಗಲಿದೆ ಎಂದು ಹೇಳಿದೆ.

2020ರ ಮಾರ್ಚ್ 1 ರಿಂದ ಜೂನ್ 30 ರವರೆಗೆ ದೇಶದ ಎಸ್‌ಟಿಪಿಐ ಆವರಣದಲ್ಲಿ ಇರಿಸಲಾಗಿರುವ ಈ ಘಟಕಗಳ ಬಾಡಿಗೆ ಮನ್ನಾ ಮಾಡಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿದೆ.

ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ದೇಶಾದ್ಯಂತ 60 ಕೇಂದ್ರಗಳನ್ನು ಹೊಂದಿದೆ.

ನಾಲ್ಕು ತಿಂಗಳ ಅವಧಿಯಲ್ಲಿ ಬಾಡಿಗೆ ಮನ್ನಾದಿಂದ ಸುಮಾರು 5 ಕೋಟಿ ರೂ ವೆಚ್ಚವಾಗಬಹುದು. ಈ 60 ಘಟಕಗಳಿಂದ ನೇರವಾಗಿ ಬೆಂಬಲಿತವಾಗಿರುವ ಸುಮಾರು 3 ಸಾವಿರ ಐಟಿ ಮತ್ತು ಐಟಿ ಉದ್ಯೋಗಿಗಳ ದೊಡ್ಡ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ABOUT THE AUTHOR

...view details