ಕರ್ನಾಟಕ

karnataka

ETV Bharat / bharat

ಕೋವಿಡ್ ನಿರ್ವಹಣೆಗೆ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಆಧಾರಿತ ಮಾದರಿಯನ್ನು ಶ್ಲಾಘಿಸಿದ ಕೇಂದ್ರ - ಕರ್ನಾಟಕದಲ್ಲಿ ಕೊರೊನಾ ಸೋಂಕು

ಕೊರೊನಾ ಸಾಂಕ್ರಾಮಿಕ ಹರಡುವುದನ್ನು ತಡೆಯುವಲ್ಲಿ ಕರ್ನಾಟಕ ಸರ್ಕಾರ ಐಟಿ ಆಧಾರಿತ ಮಾದರಿಯನ್ನು ಅಳವಡಿಸಿಕೊಂಡಿದ್ದು, ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಇತರೆ ರಾಜ್ಯಗಳಿಗೆ ಕೇಂದ್ರ ಸಲಹೆ ನೀಡಿದೆ.

Karnataka's IT-based model for Covid management
ಕರ್ನಾಟಕದ ಐಟಿ ಆಧಾರಿತ ಮಾದರಿಯನ್ನು ಶ್ಲಾಘಿಸಿದ ಕೇಂದ್ರ

By

Published : Jun 19, 2020, 7:47 PM IST

ನವದೆಹಲಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಾರ್ನಾಟಕದ ಕೋವಿಡ್ -19 ನಿರ್ವಹಣಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ. ರಾಜ್ಯದ ಮಾದರಿಯನ್ನು ತಮ್ಮ ಸ್ಥಳೀಯತೆಗೆ ಹೊಂದಿಕೊಳ್ಳುವಂತೆ ಅಳವಡಿಸಿಕೊಳ್ಳಲು ಇತರೆ ರಾಜ್ಯಗಳಿಗೆ ಸಲಹೆ ನೀಡಿದೆ.

ಪ್ರಕರಣಗಳ ಪತ್ತೆಗೆ ಭೌತಿಕ ಮತ್ತು ಫೋನ್ ಆಧಾರಿತ ಮನೆಯ ಸಮೀಕ್ಷೆ ಮಾದರಿಯನ್ನು ಕರ್ನಾಟಕ ಅಳವಡಿಸಿಕೊಂಡಿದ್ದು, ಗಮನಾರ್ಹ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯವು ಪ್ರತಿ ಪ್ರಕರಣವನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಿದ್ದು, ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದೆ. ಕೊರೊನಾ ಹರಡುವುದನ್ನು ತಡೆಯಲು ಸಂಪರ್ಕಿತರನ್ನು ಪತ್ತೆಮಾಡುವುದು ಮುಖ್ಯವಾಗಿದೆ. ಇದಕ್ಕಾಗಿ ತರಬೇತಿ ಪಡೆದ ಸುಮಾರು 10 ಸಾವಿರ ಸಿಬ್ಬಂದಿ ರಾಜ್ಯವು ವಿನ್ಯಾಸಗೊಳಿಸಿದ ವಿವರವಾದ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಪ್ರಕಾರ ಸಂಪರ್ಕಿತರ ಪತ್ತೆಹಚ್ಚುವಿಕೆಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.

ಸಂಪರ್ಕಿತರನ್ನು ಪತ್ತೆಹಚ್ಚುವಲ್ಲಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಅಪ್ಲಿಕೇಶನ್ ಅಪಾರ ಪ್ರಮಾಣದ ಕೆಲಸ ಮಾಡಿವೆ. ಸೋಂಕಿತ ವ್ಯಕ್ತಿಗಳ ನಿಜವಾದ ಮರೆವು ಅಥವಾ ವಿವಿಧ ಕಾರಣಗಳಿಂದಾಗಿ ಸತ್ಯಗಳನ್ನು ಮರೆಮಾಡಲು ಪ್ರಯತ್ನಿಸುವುದನ್ನು ನಿವಾರಿಸುವುದಕ್ಕಾಗಿ ಬಳಸಲಾಗುತ್ತಿದೆ. ಕೊಳೆಗೇರಿಗಳು ಅಥವಾ ಅಂತಹದ್ದೇ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನೀಡುವ ಮೂಲಕ ರಾಜ್ಯವು ದೊಡ್ಡ ಪ್ರದೇಶಗಳಲ್ಲಿ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡುವಲ್ಲಿ ಸಮರ್ಥವಾಗಿದೆ.

ಕರ್ನಾಟಕಕ್ಕೆ ಬರುವ ಎಲ್ಲ ಪ್ರಯಾಣಿಕರು 'ಸೇವಾ ಸಿಂಧು' ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ. ಇದು ಮುಂದಿನ ಕೆಲವು ದಿನಗಳವರೆಗೆ ಅವರನ್ನು ಮನೆ ಮತ್ತು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲು ಸಹಾಯಕವಾಗಿದೆ. ಕ್ವಾರಂಟೈನ್​ನಲ್ಲಿ ಇರಿಸಲು ಕ್ಷೇತ್ರಕಾರ್ಯಕರ್ತರಿಗೆ ಸಹಾಯ ಮಾಡಲು 'ಕ್ಯಾರೆಂಟೈನ್ ವಾಚ್ ಆ್ಯಪ್' ಅನ್ನು ಬಳಸಲಾಗುತ್ತದೆ.

ವಯಸ್ಸಾದವರು, ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು ಇನ್ಫ್ಲುಯೆನ್ಝಾದಂತಹ ಕಾಯಿಲೆ ಅಥವಾ ತೀವ್ರ ಉಸಿರಾಟದ ಕಾಯಿಲೆ ಇರುವವರನ್ನು ಆದ್ಯತೆಯ ಮೇರೆಗೆ ಗುರುತಿಸುವ, ರಕ್ಷಿಸುವ ಮತ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಕರ್ನಾಟಕವು ದೈಹಿಕ ಅಥವಾ ದೂರವಾಣಿ ಆಧಾರಿತ ಮನೆ ಮನೆ ಸಮೀಕ್ಷೆ ನಡೆಸಿದೆ.

2020ರ ಮೇ ತಿಂಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, ಒಟ್ಟು 168 ಲಕ್ಷ ಮನೆಗಳಲ್ಲಿ 153 ಲಕ್ಷ ಕುಟುಂಬಗಳನ್ನು ಈ ಸರ್ವೆ ಒಳಗೊಂಡಿದೆ. ಪೋಲಿಂಗ್ ಬೂತ್ ಮಟ್ಟದ ಅಧಿಕಾರಿಗಳು ಆರೋಗ್ಯ ಸಮೀಕ್ಷೆ ಅಪ್ಲಿಕೇಶನ್ ಮತ್ತು ವೆಬ್ ಅಪ್ಲಿಕೇಶನ್ ಬಳಸಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲು ತೊಡಗಿದ್ದರು ಎಂದು ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಶ್ಲಾಘಿಸಿದೆ.

For All Latest Updates

ABOUT THE AUTHOR

...view details