ನವದೆಹಲಿ:ಕರ್ನಾಟಕದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಅವದಿಯಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರಿಯ ತನಿಖಾ ತಂಡ (ಸಿಬಿಐ) ಎಫ್ಐಆರ್ ದಾಖಲಿಸಿಕೊಂಡಿದೆ.
ಕರ್ನಾಟಕ ರಾಜ್ಯ ಸರ್ಕಾರವು ದೂರವಾಣಿ ಕದ್ದಾಲಿಕೆಯ ಕುರಿತು ತನಿಖೆ ನಡೆಸುವಂತೆ ಅಗಸ್ಟ್ 19ರಂದು ಸಿಬಿಐಗೆ ಮನವಿ ಮಾಡಿತ್ತು. ಇದರ ಕೋರಿಕೆಯನ್ನು ಮನ್ನಿಸಿದ ಸಿಬಿಐ, ಮಾಹಿತಿ ತಂತ್ರಜ್ಞಾನ ಕಾಯ್ದೆ 22 ಮತ್ತು ಇಂಡಿಯನ್ ಟೆಲಿಗ್ರಾಪ್ ಕಾಯ್ದೆ 26ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
ಸಿಬಿಐ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಸಂಬಂಧಪಟ್ಟ ಅಧಿಕಾರಿ, ಆಡಳಿತರೂಢ ಮತ್ತು ವಿರೋಧ ಪಕ್ಷಗಳ ಮುಖಂಡರ ಹಾಗೂ ಅವರು ಸಂಬಂಧಿಗಳನ್ನು ವಿಚಾರಣೆಗೆ ಒಳಪಡಿಸಲಿದೆ. 2018ರ ಅಗಸ್ಟ್ 1ರಿಂದ 2019ರ ಅಗಸ್ಟ್ 19ರ ವರೆಗೆ ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ತನಿಖೆಗೆ ಒಳಗಾಗಲಿದ್ದಾರೆ.
ಸಿಬಿಐ ಎಸ್ಪಿ ಎಸ್ ಕಿರಣ್ ಅವರು ತನಿಖಾ ತಂಡವನ್ನು ರಚಿಸಿದ್ದು, ಸಿಬಿಐನ ಡಿವೈಎಸ್ಪಿ ಮುಖೇಶ್ ಕುಮಾರ್ ಅವರು ಇದ್ದಾರೆ. ಪ್ರಸ್ತುತ ದಾಖಲಾದ ಎಫ್ಐಆರ್ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿಲ್ಲ. ದೂರಿನಲ್ಲಿ ಸಾರ್ವಜನಿಕ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಮತ್ತು ಅಪರಿಚಿತ ಜನಪ್ರತಿನಿಧಿಗಳು ಎಂದು ಉಲ್ಲೇಖವಾಗಿದೆ.