ಕರ್ನಾಟಕ

karnataka

ETV Bharat / bharat

ಎಸ್‌ಬಿಐಗೆ 88 ಕೋಟಿ ವಂಚನೆ: ಚೆನ್ನೈ ಸ್ಟೀಲ್ ಕಂಪನಿ ವಿರುದ್ಧ ಕೇಸ್​ ದಾಖಲು

ಭಾರತೀಯ ಸ್ಟೇಟ್​ ಬ್ಯಾಂಕ್​ಗೆ 88 ಕೋಟಿ ವಂಚನೆ ಮಾಡಿದ ಆರೋಪದಡಿ ಚೆನ್ನೈನ ತಂಗಂ ಸ್ಟೀಲ್ಸ್​​ ಕಂಪನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

By

Published : Jul 7, 2020, 3:43 PM IST

bank fraud
ಬ್ಯಾಂಕ್​ ವಂಚನೆ

ಚೆನ್ನೈ: ತಮಿಳುನಾಡಿನ ಚೆನ್ನೈನ ಅಣ್ಣಾ ನಗರದಲ್ಲಿರುವ ತಂಗಂ ಸ್ಟೀಲ್ಸ್​​ ಕಂಪನಿ ಮೇಲೆ ಸೋಮವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

2008ರಿಂದ 2013ರ ಅವಧಿಯಲ್ಲಿ ನಕಲಿ ದಾಖಲೆಗಳನ್ನು ನೀಡಿ ತಂಗಂ ಕಂಪನಿಯಿಂದ 109 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಭಾರತೀಯ ಸ್ಟೇಟ್​ ಬ್ಯಾಂಕ್​ ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಲಾಗಿತ್ತು.

ತಂಗಂ ಸಂಸ್ಥೆ ವಿರುದ್ಧ ಸದ್ಯ ಎಸ್‌ಬಿಐಗೆ 88 ಕೋಟಿ ವಂಚನೆ ಮಾಡಿದ ಹಾಗೂ ಪಿಎಸ್​ಕೆ ಎಂಬ ಸ್ಟೀಲ್ ಕಂಪನಿ ಹೆಸರು ಹಾಗೂ ಅದರ ವಿಳಾಸದಲ್ಲಿ ಕಂಪನಿಯೊಂದನ್ನು ನಡೆಸುತ್ತಿರುವ ಆರೋಪವಿದೆ.

ಫೋರ್ಜರಿ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಆರು ಸೆಕ್ಷನ್​ಗಳ ಅಡಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್.ಕೃಷ್ಣಮೂರ್ತಿ, ನಿರ್ದೇಶಕ ಪಿ.ಕೆ.ವಡಿವಂಬಲ್ ಮತ್ತು ಪಿ.ಕೆ.ಶ್ರೀನಿವಾಸನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಪಿ.ಕೆ.ಶ್ರೀನಿವಾಸನ್ ಅವರ ನಿವಾಸ ಮತ್ತು ಕಚೇರಿಯಲ್ಲಿ ಸಿಬಿಐ ದಾಳಿ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ABOUT THE AUTHOR

...view details