ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಸಾವು, ಮಾಲೀಕರ ಜೊತೆ ಪ್ರಾಣ ಬಿಟ್ಟ ಕೆಲಸದಾಳು - ಕೆಲಸದವಳು ಸಾವು

ಭೀಕರ ರಸ್ತೆ ಅಪಘಾತದಲ್ಲಿ ಸಹೋದರ, ಮಕ್ಕಳು, ಮೊಮ್ಮಕ್ಕಳು, ಕೆಲಸದವಳು ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಭೀಕರ ರಸ್ತೆ ಅಪಘಾತ

By

Published : May 23, 2019, 11:51 AM IST

Updated : May 23, 2019, 12:58 PM IST

ಭುವನೇಶ್ವರ್​: ಭೀಕರ ರಸ್ತೆ ಅಪಘಾತದಲ್ಲಿ ಒಡಿಶಾದ ಒಂದೇ ಕುಟಂಬದ ಐವರು ಸೇರಿದಂತೆ ಒಟ್ಟು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಲ್ಲಿನ ಕಲಹಂಡಿ ಜಿಲ್ಲೆಯ ಖುರ್ಸೆಲ್​ಗುಡಾ ನಿವಾಸಿ ಅಶುತೋಶ್​​ ಕುಟುಂಬ ವಿಶಾಖಪಟ್ಟಣಂನಿಂದ ಬಂದಿದ್ದರು. ರಿಸೀವ್​ ಮಾಡಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಜರಿಂಗ್​ ಬಳಿ ಎದುರುಗಡೆಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಶುತೋಶ್​ರ ಇಬ್ಬರು ಮೊಮ್ಮಕ್ಕಳು, ಆತನ ಸಹೋದರ ಜಗನ್ನಾಥ್​ ಬೆಹೆರಾ, ಅಶುತೋಶ್​​ ಮಗ ವಿಕ್ಕಿ, ಮಗಳು ನಿವಿಯಾ, ಮನೆ ಕೆಲಸದವಳ ಸೇರಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದ್ರೆ ಈ ಅಪಘಾತದಿಂದ ಅಶುತೋಷ್​ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : May 23, 2019, 12:58 PM IST

ABOUT THE AUTHOR

...view details