ಬೆಂಗಳೂರು:ತಮಿಳುನಾಡಿನ ತಿರುವನಮಲೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೋರಮಂಗಲದಲ್ಲಿ ಗ್ರಾನೈಟ್ ಉದ್ಯಮ ನಡೆಸುತ್ತಿದ್ದ ನಗರದ ಉದ್ಯಮಿ ಶ್ರೀನಾಥ್ ರೆಡ್ಡಿ, ಪತ್ನಿ ಚಂದ್ರಮಾಲಾ ಪುತ್ರಿ ಶಾಲಿನಿ ಪುತ್ರ ಭರತ್ ಹಾಗೂ ಅಳಿಯಸಂದೀಪ್ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳುನಾಡಿನಲ್ಲಿ ಅಪಘಾತ: ಕರ್ನಾಟಕದ ಉದ್ಯಮಿ ಸೇರಿ ಐವರ ದುರ್ಮರಣ - accident in tamilnadu
ತಮಿಳುನಾಡಿನ ತಿರುವನಮಲೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ಗ್ರಾನೈಟ್ ಉದ್ಯಮಿ ಕುಟುಂಬ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಕರ್ನಾಟಕ ಉದ್ಯಮಿ ಮೃತ
ಮೃತರೆಲ್ಲರೂ ಅಣ್ಣಮಲೈಯರ್ ದರ್ಶನಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇವರು ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.