ಕರ್ನಾಟಕ

karnataka

ETV Bharat / bharat

ಅಮಿತ್ ಶಾ ಭೇಟಿಗಾಗಿ ಪಟ್ಟುಹಿಡಿದ ಅತೃಪ್ತರು, ಅಸಮಾಧಾನ ಶಮನಕ್ಕೆ ಬಿಎಸ್‌ವೈ ಪ್ರಯತ್ನ - CM Yadiyurappa

ಅಮಿತ್​ ಶಾ ಭೇಟಿ ಮಾಡಲು ಪಟ್ಟು ಹಿಡಿದು ಕುಳಿತಿರುವ ಅನರ್ಹ ಶಾಸಕರನ್ನು ಸಿಎಂ ಬಿಎಸ್​ವೈ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ವೇಳೆ ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ಅರ್ಜಿ ಪ್ರಸ್ತಾಪಿಸುವ ಭರವಸೆಯನ್ನೂ ಕೂಡ ಬಿಎಸ್​ವೈ ನೀಡಿದ್ದಾರೆ.

ಅಮಿತ್​ ಶಾ ಭೇಟಿಗಾಗಿ ಕಾಯುತ್ತಿರುವ ಬಿಎಸ್​ವೈ, ಅನರ್ಹ ಶಾಸಕರು

By

Published : Aug 23, 2019, 3:39 PM IST

Updated : Aug 23, 2019, 3:54 PM IST

ನವದೆಹಲಿ: ರಾಜ್ಯ ಬಿಜೆಪಿಯಿಂದ ಅಸಮಾಧಾನಗೊಂಡು, ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಅಮಿತ್​ ಶಾ ಭೇಟಿಗೆ ತುದಿಗಾಗಲ್ಲಿ ನಿಂತಿರುವ ಅನರ್ಹ ಶಾಸಕರನ್ನು ಸಿಎಂ ಯಡಿಯೂರಪ್ಪ ಸಮಾಧಾನ ಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಖಾಸಗಿ ಹೊಟೇಲ್‌ನಲ್ಲಿ ಅತೃಪ್ತರ ಜೊತೆ ಬಿಎಸ್ವೈ ಚರ್ಚೆ:

ಈ ಕಾರಣ ದೆಹಲಿಗೆ ತೆರಳಿರುವ ಬಿಎಸ್​ವೈ, ದೆಹಲಿಯ ಕರ್ನಾಟಕ ಭವನದಿಂದ ಖಾಸಗಿ ಹೋಟೆಲ್​ಗೆ ಅನರ್ಹ ಶಾಸಕರನ್ನು ಕರೆಸಿಕೊಂಡಿದ್ದಾರೆ. ಬಳಿಕ ಸುಮಾರು 2 ಗಂಟೆಗಳಿಂದ ಸಭೆ ನಡೆಸಿ ಅವರ ಮನವೊಲಿಸಲು ಹರಸಾಹಸ ಪಡ್ತಿದ್ದಾರೆ. ಈ ವೇಳೆ ಸಿಎಂ ಪುತ್ರ ಬಿ.ವೈ ರಾಘವೇಂದ್ರ ಕೂಡ ಸಾಥ್​ ನೀಡಿದ್ದಾರೆ.

ಇನ್ನೂ ಸಭೆಯ ವೇಳೆ ಅನರ್ಹ ಶಾಸಕರ ಆತಂಕಕ್ಕೆ ಕಾರಣವೇನು? ಸರ್ಕಾರ ರಚನೆಗೂ ಮುನ್ನ ಅವರಿಗೆ ನೀಡಿದ್ದಂತಹ ಭರವಸೆಗಳೇನು? ಅವರನ್ನು ಸಮಾಧಾನ ಪಡಿಸಲು ಏನು ಮಾಡಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. ಇದೇ ವೇಳೆ ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ಅರ್ಜಿ ಪ್ರಸ್ತಾಪಿಸುವ ಭರವಸೆಯನ್ನೂ ಬಿಎಸ್​ವೈ ನೀಡಿದ್ದಾರೆ ಎನ್ನಲಾಗಿದೆ.

ಪಟ್ಟು ಸಡಿಲಿಸದ ಅತೃಪ್ತ ಶಾಸಕರು?

ಈ ನಡುವೆ ಬ್ಯುಸಿಯಾಗಿರುವ ಅಮಿತ್​ ಶಾ ಇನ್ನೂ ಕೂಡ ಯಾರನ್ನೂ ಭೇಟಿಯಾಗಿಲ್ಲ. ಹಾಗಾಗಿ ಇಂದು ಸಂಜೆಯಾದರೂ ಸರಿ ನಾಳೆಯಾದರೂ ಸರಿ ದೆಹಲಿಯಲ್ಲಿಯೇ ತಂಗಿದ್ದು, ಅವರಿಗಾಗಿ ಕಾದು ಭೇಟಿಯಾಗಿಯೇ ಹಿಂತಿರುಗುವುದಾಗಿ ತಿಳಿಸಿದ್ದಾರೆ.

Last Updated : Aug 23, 2019, 3:54 PM IST

ABOUT THE AUTHOR

...view details