ಜೈಪುರ: ಈಟಿವಿ ಭಾರತ್‌ನ ಪ್ರಾದೇಶಿಕ ಸಂಪಾದಕ ಬ್ರಜ್ ಮೋಹನ್ ಸಿಂಗ್, ಹಿರಿಯ ಪತ್ರಕರ್ತ ಓಂ ಸೈನಿ ಮತ್ತು ಖ್ಯಾತ ವಕೀಲ ಹೇಮಂತ್ ನಾಟಾ ಅವರು ಇತ್ತೀಚೆಗೆ ವಿಶೇಷ ಸಂವಾದ ನಡೆಸಿದ್ದು, ಈ ವೇಳೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದರು.
ರಾಜಸ್ಥಾನ ರಾಜಕೀಯ ವಿದ್ಯಮಾನ: ಈ ಟಿವಿ ಭಾರತದಲ್ಲಿ ಸಂವಾದ - ಈಟಿವಿ ಭಾರತ ಸಂದರ್ಶನ
ಈಟಿವಿ ಭಾರತ್‌ನ ಪ್ರಾದೇಶಿಕ ಸಂಪಾದಕ ಬ್ರಜ್ ಮೋಹನ್ ಸಿಂಗ್, ಹಿರಿಯ ಪತ್ರಕರ್ತ ಓಂ ಸೈನಿ ಮತ್ತು ಖ್ಯಾತ ವಕೀಲ ಹೇಮಂತ್ ನಾಟಾ ಅವರು ಇತ್ತೀಚೆಗೆ ವಿಶೇಷ ಸಂವಾದ ನಡೆಸಿದರು.
ಕಾಂಗ್ರೆಸ್ ಸದಸ್ಯರಾಗಿ ಸೇರ್ಪಡೆಗೊಂಡ ರಾಜಸ್ಥಾನದ ಆರು ಬಿಎಸ್ಪಿ ಶಾಸಕರಿಗೆ ಪಕ್ಷದ ರಾಷ್ಟ್ರೀಯ ವರಿಷ್ಠೆ ಮಾಯಾವತಿ, ಸಿಎಂ ಅಶೋಕ್ ಗೆಹ್ಲೋಟ್ಗೆ ಮತ ಹಾಕದಂತೆ ಆದೇಶಿಸಿದ್ದರು. ಇದಾದ ಬಳಿಕ ರಾಜಸ್ಥಾನ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಪ್ರಸ್ತುತ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರ ರಾಜಕೀಯ ಅನಿಶ್ಚಿತತೆ ಎದುರಿಸುತ್ತಿದೆ. ಈ ಸಂಬಂದ ಇವರೆಲ್ಲ ಸಂವಾದ ನಡೆಸಿದರು. ಸರ್ಕಾರ, ಬಂಡಾಯ ಹಾಗೂ ಪ್ರತಿಪಕ್ಷಗಳ ನಡೆಗಳ ಬಗ್ಗೆ ವಿಶ್ಲೇಷಣೆ ಮಾಡಿದರು.
ಬಿಎಸ್ಪಿಯು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಸಂವಿಧಾನದ 10ನೇ ಶೆಡ್ಯೂಲ್ಡ್( ಪರಿಚ್ಛೇದ) ಪ್ರಕಾರ, ಬಿಎಸ್ಪಿ ಆರು ಶಾಸಕರು (ಕಾಂಗ್ರೆಸ್) ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಲೀನ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಾಯಿತು. ಈ ಸಂಬಂಧ ಕಾನೂನು ತಜ್ಞರು ಏನ್ ಹೇಳ್ತಾರೆ, ಸಂವಿಧಾನ ಏನ್ ಹೇಳಿದೆ ಎಂಬ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು. ಬಿಎಸ್ಪಿಯು ಶಾಸಕಾಂಗ ಪಕ್ಷದ ಮುಖಂಡರಿಗೆ ಮಾತ್ರ ವಿಪ್ ಹೊರಡಿಸಬಹುದು. ಬದಲಾಗಿ ಕಾಂಗ್ರೆಸ್ ಆಡಳಿತದಲ್ಲಿ ಕಾರ್ಯ ನಿರ್ವಹಿಸುವ ಶಾಸಕರಿಗೆ ವಿಪ್ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಇವರೆಲ್ಲ ಅಭಿಪ್ರಾಯಪಟ್ಟರು.