ಹೈದರಾಬಾದ್: ಕೊರೊನಾ ವೈರಸ್ನಿಂದ ಜಗತ್ತು ತತ್ತರಿಸಿದೆ. ಬಹುತೇಕ ಸಮಾಜದ ಕೆಳಹಂತದ ಬಡವರೇ ಇದರಿಂದ ಹೆಚ್ಚು ಬಾಧಿತರಾಗಿದ್ದಾರೆ. ಬ್ರೆಜಿಲ್ನ ಕತೆಯೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಬ್ರೆಜಿಲ್ನ ಸ್ಲಂ ನಿವಾಸಿಗಳಿಗೆ ಕೊರೊನಾ ಬರದಂತೆ ಹೇಗೆ ತಡೆಯುವುದು ಎಂಬ ಬಗ್ಗೆ ತರಬೇತಿ ಆಯೋಜಿಸಲಾಗುತ್ತಿದೆ.
ಬ್ರೆಜಿಲ್ನ ಸ್ಲಂ ನಿವಾಸಿಗಳಿಗೆ ಕೊರೊನಾ ಬರದಂತೆ ತಡೆಯಲು ತರಬೇತಿ - ತರಬೇತಿ
ಕೋವಿಡ್ ಸೋಂಕಿನಿಂದ ಹೆಚ್ಚು ಅಪಾಯವಿರುವುದು ಬಡವರಿಗೆ. ಕೋವಿಡ್ ಬಂದಲ್ಲಿ ಅದರಿಂದ ಪಾರಾಗಲು ಅವರಿಗೆ ಸಾಧ್ಯವೇ ಆಗದು ಎಂಬ ಪರಿಸ್ಥಿತಿ ಬ್ರೆಜಿಲ್ನಲ್ಲಿದೆ. ಹೀಗಾಗಿ ಬ್ರೆಜಿಲ್ನ ಸ್ಲಂ ನಿವಾಸಿಗಳಿಗೆ ಕೊರೊನಾ ಬರದಂತೆ ತಡೆಯುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಲಾಗುತ್ತಿದೆ.
63 ವರ್ಷದ ಮನೆಗೆಲಸ ಮಾಡುವ ಮಹಿಳೆ ಕೋವಿಡ್ಗೆ ಬಲಿಯಾಗಿದ್ದು ಬ್ರೆಜಿಲ್ನ ಮೊದಲ ಕೋವಿಡ್ ಸಾವಾಗಿತ್ತು. ಇಟಲಿಯಿಂದ ಮರಳಿ ಬಂದಿದ್ದ ಮಾಲೀಕನಿಂದ ಆಕೆಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಆಕೆಯ ಮಾಲೀಕ ಮಾತ್ರ ಸೋಂಕಿನಿಂದ ಗುಣಮುಖನಾಗಿ ಬದುಕಿದ್ದಾನೆ. ಮಾಲೀಕನಿಗೆ ಚಿಕಿತ್ಸೆ ಪಡೆಯಲು ಹಣ ಹಾಗೂ ವಿಶ್ರಾಂತಿಗಾಗಿ ಸಾಕಷ್ಟು ಸಮಯವಿತ್ತು. ಅದು ಆಕೆಯ ಬಳಿ ಇರಲಿಲ್ಲ. ಹೀಗಾಗಿ ಆಕೆ ಸಾವನ್ನಪ್ಪಬೇಕಾಯಿತು.
ಈ ಘಟನೆಯನ್ನು ನೋಡಿದರೆ ಕೋವಿಡ್ ಸೋಂಕಿನಿಂದ ಹೆಚ್ಚು ಅಪಾಯವಿರುವುದು ಬಡವರಿಗೇ ಎಂಬುದು ಗೊತ್ತಾಗುತ್ತದೆ. ಕೋವಿಡ್ ಬಂದಲ್ಲಿ ಅದರಿಂದ ಪಾರಾಗಲು ಅವರಿಗೆ ಸಾಧ್ಯವೇ ಆಗದು ಎಂಬ ಪರಿಸ್ಥಿತಿ ಇದೆ. ಹೀಗಾಗಿಯೇ ಈಗ ಸ್ಲಂಗಳಲ್ಲಿರುವ ಬಡವರಿಗೆ ಸುರಕ್ಷತೆಯ ತರಬೇತಿಗಳನ್ನು ನೀಡಲಾಗುತ್ತಿದೆ.