ಮೊರದಾಬಾದ್(ಉತ್ತರಪ್ರದೇಶ):ಗುರುವಾರ ಬೆಳಗ್ಗೆ ಇಲ್ಲಿನ ಆದರ್ಶ್ ನಗರದ ಸ್ಥಳೀಯ ಶಾಸಕರ ಭದ್ರತಾ ಸಿಬ್ಬಂದಿಯೊಬ್ಬರು ತಮ್ಮ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಸಕನ ಬಾಡಿಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಉತ್ತರಪ್ರದೇಶದ ಮೊರದಾಬಾದ್ ಶಾಸಕ ಡೆಹತ್ ಹಾಜಿ ಇಕ್ರಮ್ ಖುರೈಶಿ ಎಂಬುವರ ಬಾಡಿಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ
ಕಾನ್ಸ್ಟೆಬಲ್ ಮನೀಶ್ ಪ್ರತಾಪ್ ಸಿಂಗ್ (24) ಆತ್ಮಹತ್ಯೆಗೆ ಶರಣಾದವರು. ಈತನನ್ನು ಶಾಸಕ ಡೆಹತ್ ಹಾಜಿ ಇಕ್ರಮ್ ಖುರೈಶಿಯ ಬಾಡಿಗಾರ್ಡ್ ಆಗಿ ನಿಯೋಜಿಸಲಾಗಿತ್ತು. ಪ್ರತಾಪ್ ಸಿಂಗ್ ಸ್ನೇಹಿತರೊಬ್ಬರು ಗುರುವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಇಲ್ಲಿನ ಕಟ್ಘರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.