ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಮಾರಾಮಾರಿ ಮುಂದುವರೆದಿದೆ. ಹೌರಾ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಟಿಎಂಸಿ ಕಾರ್ಯಕರ್ತರು ಗುಂಡು ಹಾರಿಸಿದ್ದಾರೆ. ಕೂಡಲೇ ಗಾಯಾಳುವನ್ನು ಕೋಲ್ಕತ್ತಾ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಬಂಗಾಳದಲ್ಲಿ ಮುಂದುವರಿದ ರಾಜಕೀಯ ದ್ವೇಷ: ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಿದ ಟಿಎಂಸಿ - ಬಿಜೆಪಿ ಕಾರ್ಯಕರ್ತನನ್ನ ಗುಂಡಿಕ್ಕಿ ಹತ್ಯೆಗೈದ ಟಿಎಂಸಿ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಭೆ ಮುಂದುವರೆದಿದ್ದು, ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬಿಜೆಪಿ ಮಾರಾಮಾರಿ
ಹೂವಿನ ವ್ಯಾಪಾರಿಯಾಗಿರುವ ಕಿಂಗರ್ ಮಾಝಿ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗುವಾಗ ಟಿಎಂಸಿ ಕಾರ್ಯಕರ್ತ ಪರಿತೋಷ್ ಮಾಝಿ ಹಾಗೂ ಸಹಚರರು ಅಡ್ಡಗಟ್ಟಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ರಾಜಕೀಯ ಹಿಂಸಾಚಾರ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ಆದರೆ, ಟಿಎಂಸಿ ಹಾಗೂ ಪೊಲೀಸರು ಇದು ಜಮೀನು ವಿವಾದದಿಂದಾಗಿ ಸಂಭವಿಸಿರುವ ಕೃತ್ಯ ಎಂದು ಸಮಜಾಯಿಷಿ ನೀಡಿವೆ.