ನವದೆಹಲಿ: 75 ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯಬೇಕೆಂಬ ಬಿಜೆಪಿಯ ನಿಯಮ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಈ ಸಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಬಿ.ಸಿ. ಖಂಡೂರಿ ಅವರ ಪರಿಸ್ಥಿತಿಯೂ ಹೀಗೇ ಆಗಿದೆ.
ಲೋಕ ಸಮರದಲ್ಲಿ ಅಡ್ವಾಣಿಗಿಲ್ಲ ಟಿಕೆಟ್... ಮತ್ತೆ ಹಿರಿಯರಿಗೆ ಕೊಕ್ - ಅಡ್ವಾಣಿ
1998ರಿಂದಲೂ ಗುಜರಾತ್ನ ಗಾಂಧಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಲ್. ಕೆ. ಅಡ್ವಾಣಿ ಅವರು ಬಿಜೆಪಿಯ ಅತಿ ಹಿರಿಯ ಸಂಸದೀಯ ಪಟು.
ಪಕ್ಷದ ಈ ಖಡಕ್ ನಿರ್ಧಾರ ಪ್ರಕಟಿಸುವ ಮುನ್ನವೇ ಹಿರಿಯ ನಾಯಕರಾದ ಕಲಿರಾಜ್ ಮಿಶ್ರಾ ಮತತು ಭಗತ್ ಸಿಂಗ್ ಕೋಶ್ಯಾರಿ ಅವರು ತಾವು ಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಖಚಿತಪಡಿಸಿದ್ದರು.
ಕಾನ್ಪುರ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ಪ್ರಕಟಿಸದ ಕಾರಣ ಆ ಕ್ಷೇತ್ರ ಪ್ರತಿನಿಧಿಸುವ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಗೊಂದಲದಲ್ಲಿದ್ದಾರೆ. 1998ರಿಂದಲೂ ಗುಜರಾತ್ನ ಗಾಂಧಿ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಲ್. ಕೆ. ಅಡ್ವಾಣಿ ಅವರು ಬಿಜೆಪಿಯ ಅತಿ ಹಿರಿಯ ಸಂಸದೀಯ ಪಟು. 1970ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅಡ್ವಾಣಿ ಅವರು ಈಗ ಬಿಜೆಪಿ ಪಾಳಯದಲ್ಲಿ ಮಾರ್ಗದರ್ಶಕರಾಗಿ ಅಷ್ಟೆ ಉಳಿದಿದ್ದಾರೆ.