ನವದೆಹಲಿ: ಈಗಾಗಲೇ ಘೋಷಣೆಯಾಗಿರುವ ಲೋಕಸಭಾ ಚುನಾವಣೆ ಜತೆಗೆ ಸಿಕ್ಕೀಂ ಹಾಗೂ ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ. ಅದಕ್ಕಾಗಿ ಇದೀಗ ಬಿಜೆಪಿ ಕೆಲ ಕ್ಷೇತ್ರಗಳಿಗಾಗಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.
ಸಿಕ್ಕೀಂ, ಅರುಣಾಚಲ ವಿಧಾನಸಭೆ ಫೈಟ್: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್!
ದೇಶಾದ್ಯಂತ ಈಗಾಗಲೇ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಈ ಮಧ್ಯೆ ಅರುಣಾಚಲಪ್ರದೇಶ ಹಾಗೂ ಸಿಕ್ಕೀಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ. ಅದಕ್ಕಾಗಿ ಬಿಜೆಪಿ 18 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.
ಸಿಕ್ಕೀಂ ಹಾಗೂ ಅರುಣಾಚಲ ಪ್ರದೇಶದ ಕೆಲ ಕ್ಷೇತ್ರಗಳಿಗಾಗಿ ಭಾರತೀಯ ಜನತಾ ಪಾರ್ಟಿ 18 ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ ಮಾಡಿದೆ. ಲೋಕಸಭಾ ಚುನಾವಣೆಗಾಗಿ ನಿನ್ನೆ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಕೂಡ ನಡೆದಿತ್ತು. ಅದರ ಬೆನ್ನಲ್ಲೇ ಎರಡು ರಾಜ್ಯಗಳ ವಿಧಾನಸಭೆ ಕ್ಷೇತ್ರಗಳಿಗಾಗಿ ಇಂದು ಈ ಪಟ್ಟಿ ರಿಲೀಸ್ ಆಗಿದೆ. ಇದರಲ್ಲಿ ಅರುಣಾಚಲಪ್ರದೇಶದ ಆರು ಕ್ಷೇತ್ರ ಹಾಗೂ ಅರುಣಾಚಲಪ್ರದೇಶದ 12 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಇದೆ.
ಸಿಕ್ಕೀಂ 32 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದರೆ, ಅರುಣಾಚಲಪ್ರದೇಶ 60 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಎರಡು ರಾಜ್ಯಗಳಲ್ಲಿ ಎಪ್ರಿಲ್ 11ರಂದು ನಡೆಯಲಿರುವ ಲೋಕಸಭೆ ಚುನಾವಣೆ ಜತೆಗೆ ಈ ಮತದಾನ ಕೂಡ ನಡೆಯಲಿದೆ.