ಡೆಹ್ರಾಡೂನ್( ಉತ್ತರಾಖಂಡ):ಭಾರತೀಯ ಜನತಾ ಪಕ್ಷದ ಕೌನ್ಸಿಲರ್ ಒಬ್ಬರಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಾಖಂಡ್ದಲ್ಲಿ ನಡೆದಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.
ಉತ್ತರಾಖಂಡ್ದಲ್ಲಿ ಬಿಜೆಪಿ ಕೌನ್ಸಿಲರ್ ಗುಂಡಿಕ್ಕಿ ಹತ್ಯೆ - ಬಿಜೆಪಿ ಕೌನ್ಸಿಲರ್ ಪ್ರಕಾಶ್ ಸಿಂಗ್ ಧಾಮಿಯಾ ಹತ್ಯೆ
ಉತ್ತರಾಖಂಡ್ನಲ್ಲಿ ದುಷ್ಕರ್ಮಿಗಳ ಗುಂಪೊಂದು ಬಿಜೆಪಿ ಕೌನ್ಸಿಲರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ರುದ್ರಪೂರ್ ಮುನ್ಸಿಪಾಲ್ ಕಾರ್ಪೂರೇಷನ್ನ ಭಾದೈಪುರ ವಾರ್ಡ್ನ ಕೌನ್ಸಿಲರ್ ಆಗಿದ್ದ ಪ್ರಕಾಶ್ ಸಿಂಗ್ ಧಾಮಿಯಾ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರುದ್ರಪೂರ್ ಮುನ್ಸಿಪಾಲ್ ಕಾರ್ಪೂರೇಷನ್ನಲ್ಲಿ ಅವರು ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಗ್ಗೆ ಮನೆಯಿಂದ ಹೊರಬಂದ ವೇಳೆ ಅಲ್ಲಿಗೆ ತೆರಳಿರುವ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಇದರಲ್ಲಿ ರಾಜಕೀಯ ವ್ಯಕ್ತಿಗಳ ಹುನ್ನಾರ ಇರಬಹುದು ಎಂದು ಹೇಳಲಾಗುತ್ತಿದೆ.