ಕರ್ನಾಟಕ

karnataka

ETV Bharat / bharat

ಬಿಜೆಪಿಯವರು ಐಟಿ ದಾಳಿ ನಡೆಸಿ ನನ್ನ ಗೆಲುವನ್ನು ತಡೆಯಲಾಗದು: ಕನ್ನಿಮೊಳಿ

ಐಟಿ ದಾಳಿಯು ಪ್ರಜಾಪ್ರಭುತ್ವ ವಿರೋಧಿ, ಉದ್ದೇಶಪೂರ್ವಕ ಪ್ಲಾನ್​ ಆಗಿದೆ. ಹೀಗೆ ಬಿಜೆಪಿಯು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆಸಿ ತಮ್ಮನ್ನು ಸೋಲಿಸಲಾಗದು ಎಂದು ಡಿಎಂಕೆ ನಾಯಕಿ ಕನ್ನಿಮೊಳಿ ಹೇಳಿದ್ದಾರೆ.

ಕನಿಮೊಳಿ

By

Published : Apr 17, 2019, 6:33 AM IST

Updated : Apr 17, 2019, 6:42 AM IST

ತೂತುಕುಡಿ: ಬಿಜೆಪಿಯವರು ಐಟಿ ದಾಳಿ ನಡೆಸಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವನ್ನು ತಡೆಯಲಾಗದು ಎಂದು ಡಿಎಂಕೆ ನಾಯಕಿ ಕನ್ನಿಮೊಳಿ ಕಿಡಿಕಾರಿದ್ದಾರೆ.

ತಮ್ಮ ನಿವಾಸದ ಮೇಲೆ ನಡೆದ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಕನ್ನಿಮೊಳಿ, ಐಟಿ ದಾಳಿಯು ಪ್ರಜಾಪ್ರಭುತ್ವದ ವಿರೋಧಿ, ಉದ್ದೇಶಪೂರ್ವಕ ಪ್ಲಾನ್​ ಆಗಿದೆ. ಹೀಗೆ ಬಿಜೆಪಿಯು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆಸಿ ತಮ್ಮನ್ನು ಸೋಲಿಸಲಾಗದು. ಈ ರೀತಿ ಐಟಿ ದಾಳಿ ನಡೆಸಿ ಹೆದರಿಸಲು ಯತ್ನಿಸಲಾಗುತ್ತಿದೆ. ತೂತುಕುಡಿಯಲ್ಲಿ ಚುನಾವಣೆ ನಿಲ್ಲಿಸಲು ಹೀಗೆ ಮಾಡಲಾಗುತ್ತಿದೆ. ಆದರೆ ಡಿಎಂಕೆ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಐಟಿ ಇಲಾಖೆ ಅಧಿಕಾರಿಗಳು ಕನ್ನಿಮೊಳಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ಐಟಿ ದಾಳಿ ವೇಳೆ ಕನ್ನಿಮೊಳಿ ತಮ್ಮ ನಿವಾಸದಲ್ಲೇ ಇದ್ದು, ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ತಿಳಿದುಬಂದಿದೆ.

Last Updated : Apr 17, 2019, 6:42 AM IST

For All Latest Updates

TAGGED:

ABOUT THE AUTHOR

...view details