ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ಮಧ್ಯೆ ಮಾನವೀಯ ಕಾರ್ಯ... ಕೇಕ್​ ಒಯ್ದು ಬಾಲಕನ ಹುಟ್ಟುಹಬ್ಬ ಆಚರಿಸಿದ ಬಿಹಾರ ಪೊಲೀಸ್! - ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ

ಬಿಹಾರ ಪೊಲೀಸರು ನಾಲ್ಕು ವರ್ಷದ ಬಾಲಕನ ಜನ್ಮದಿನಾಚರಣೆಗೆ ಕೇಕ್ ತೆಗೆದುಕಂಡು ಹೋಗಿ, ಹುಟ್ಟುಹಬ್ಬ ಆಚರಿಸಿದ್ದಾರೆ.

police
police

By

Published : Apr 20, 2020, 9:38 AM IST

ಪಾಟ್ನಾ(ಬಿಹಾರ):ಬಿಹಾರದ ದರ್ಭಂಗಾ ಜಿಲ್ಲೆಯ ಲಹೇರಿಯಸರಾಯ್ ಪೊಲೀಸರು ನಾಲ್ಕು ವರ್ಷದ ಬಾಲಕನ ಜನ್ಮದಿನಾಚರಣೆಗೆ ಕೇಕ್ ತೆಗೆದುಕಂಡು ಹೋಗಿ, ಹುಟ್ಟುಹಬ್ಬ ಆಚರಿಸುವ ಮೂಲಕ ಸರ್​ಪ್ರೈಸ್​ ನೀಡಿದ್ದಾರೆ.

ಅಂಕುರ್ ಕುಮಾರ್ ಗುಪ್ತಾ ತಮ್ಮ ಮಗನಿಗೆ ಕೇಕ್ ಖರೀದಿಸಲು ಬೆಳಗ್ಗೆ ಹೋಗಿದ್ದರು. ಆದರೆ, ಲಾಕ್ ಡೌನ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮನೆಗೆ ಮರಳುವಂತೆ ಪೊಲೀಸರು ಸೂಚಿಸಿದ್ದರು.

"ನನ್ನ ಮಗನ ಜನ್ಮದಿನದಂದು ಕೇಕ್ ಖರೀದಿಸಲು ನಾನು ಹೊರಗೆ ಹೋಗಿದ್ದೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಪೊಲೀಸರು ನನ್ನ ವಿಳಾಸವನ್ನು ಕೇಳಿ ಮನೆಗೆ ವಾಪಸ್ ಕಳುಹಿಸಿದರು. ಅವರೇ ಕೇಕ್ ತಂದು ನನ್ನ ಮಗನ ಜನ್ಮದಿನವನ್ನು ಆಚರಿಸುತ್ತಾರೆ ಎಂದು ನಾವು ಸ್ವಲ್ಪವೂ ನಿರೀಕ್ಷಿಸಿರಲಿಲ್ಲ. ನನ್ನ ರಾಜ್ಯದ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ" ಎನ್ನುವ ಮೂಲಕ ಅಂಕುರ್ ಕುಮಾರ್​ ಕೃತಜ್ಞತೆ ಸಲ್ಲಿಸಿದ್ದಾರೆ.

"ನಮ್ಮ ಪೊಲೀಸರು ಅಂಕುರ್ ಅವರ ಮನೆಗೆ ಹೋಗಿ, ಅಂಕುರ್​ ಮಗನಿಗೆ ಉಡುಗೊರೆ ನೀಡಿದರು. ಲಾಕ್‌ಡೌನ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಜನರಿಗೆ ಮನವಿ ಮಾಡಿದರು" ಎಂದು ಎಸ್‌ಎಸ್‌ಪಿ ಬಾಬುರಾಮ್ ಹೇಳಿದ್ದಾರೆ.

"ಬಾಲಕನ ಜನ್ಮದಿನಾಚರಣೆಯಲ್ಲಿ ಇಡೀ ತಂಡವೇ ಭಾಗವಹಿಸಿತ್ತು. ಅವರು ಚಾಕೊಲೇಟ್‌ಗಳನ್ನು ವಿತರಿಸಿ, ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿದರು" ಎಂದು ಎಸ್‌ಎಸ್‌ಪಿ ಬಾಬುರಾಮ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details