ಕರ್ನಾಟಕ

karnataka

ETV Bharat / bharat

ಬಿಹಾರ ಮತ ಎಣಿಕೆ: ಮಂಕಾದ ಬಲಿಷ್ಠ ಜೆಡಿಯು, ಎಡ ಪಕ್ಷಗಳಲ್ಲಿ ಗೆಲುವಿನ ಹುಮ್ಮಸ್ಸು

ಜೆಡಿಯು ಹಿನ್ನಡೆ ಸಾಧಿಸುತ್ತಿದ್ದರೆ, ವಿವಿಧ ಚುನಾವಣೆಗಳಲ್ಲಿ ಸತತ ಸೋಲನುಭವಿಸುತ್ತಿರುವ ಕಾಂಗ್ರೆಸ್​ ಈ ಬಾರಿ ಕೆಲವೊಂದು ಸ್ಥಾನಗಳ ಮುನ್ನಡೆ ಗಳಿಸಿಕೊಂಡಿದೆ. ಇದು ಕಾಂಗ್ರೆಸ್​ ಪಾಳಯದಲ್ಲಿ ಭಾರಿ ಆಶಾಭಾವನೆ ಮೂಡಿಸಿದೆ. ಅದೇ ರೀತಿ ಮಹಾಘಟನಬಂಧನದ ಪಾಲುದಾರ ಎಡ ಪಕ್ಷಗಳು ಕೂಡ ಈ ಬಾರಿ ಕೆಲವೊಂದು ಸ್ಥಾನಗಳನ ಮುನ್ನಡೆ ಸಾಧಿಸಿದೆ.

By

Published : Nov 10, 2020, 10:17 AM IST

Bihar Assembly election Counting
ಬಿಹಾರ ಚುನಾವಣೆ ಮತ ಎಣಿಕೆ

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಫಲಿತಾಂಶದಲ್ಲಿ ಎನ್​ಡಿಎ ಒಕ್ಕೂಟದ ಬಲಿಷ್ಠ ಪಕ್ಷ ಜೆಡಿಯುವನ್ನು ಹಿಂದಿಕ್ಕುವಲ್ಲಿ ಎಡ ಪಕ್ಷಗಳು ಸಫಲವಾಗಿವೆ.

ಕಾಂಗ್ರೆಸ್​, ಆರ್​ಜೆಡಿ, ಸಿಪಿಐ, ಸಿಪಿಐಎಂಎಲ್ಎಲ್​, ಸಿಪಿಎಂ ಪಕ್ಷಗಳು ಸೇರಿ ಈ ಬಾರಿ ಮಹಾಘಟಬಂಧನ್​ ಮಾಡಿಕೊಂಡಿವೆ. ಕಾಂಗ್ರೆಸ್​ 70 ಅಭ್ಯರ್ಥಿಗಳು ಕಣಕ್ಕಿಳಿಸಿದ್ದು, ಈಗಾಗಲೇ 25 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಆರ್​ಜೆಡಿ 144 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ 60 ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಆದರೆ, ನಿತೀಶ್​ ಕುಮಾರ್ ನೇತೃತ್ವದ ಜೆಡಿಯುಗೆ ಈ ಬಾರಿ ಭಾರಿ ಹಿನ್ನಡೆಯಾಗುವ ಲಕ್ಷಣ ಆರಂಭಿಕ ಮತ ಎಣಿಕೆಯಲ್ಲಿ ಕಂಡು ಬಂದಿದೆ.

ಆರ್​ಜೆಡಿ ಮತ್ತು ಜೆಡಿಯು ಬಿಹಾರದ ಎರಡು ಪ್ರಮುಖ ಪಕ್ಷಗಳಾಗಿದ್ದು, ನಂತರದ ಸ್ಥಾನಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್​ಗೆ ಪ್ರಾಶಸ್ತ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಎಡ ಪಕ್ಷಗಳು ಮಹಾಘಟಬಂಧನ್ ಮಾಡಿಕೊಂಡರೆ, ಜೆಡಿಯು ಮತ್ತು ಬಿಜೆಪಿ ಎನ್​ಡಿಎ ಮೈತ್ರಿಕೂಟ ರಚಿಸಿಕೊಂಡಿತ್ತು. ಆದರೆ, ಇತ್ತೀಚಿನ ಮತ ಎಣಿಕೆಯ ಫಲಿತಾಂಶ ಗಮನಿಸಿದರೆ, ಮಹಾಘಟಬಂಧನ್​ಗೆ ಎನ್​ಡಿಎ ಮೈತ್ರಿಕೂಟದ ಬಿಜೆಪಿ ಮಾತ್ರ ಪ್ರಬಲ ಪೈಪೋಟಿ ನೀಡುತ್ತಿದೆ. ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದ ಜೆಡಿಯು ಪಕ್ಷ 2015 ರ ಚುನಾವಣೆಗಿಂತ ಸುಮಾರು 20 ಸ್ಥಾನಗಳ ಹಿನ್ನಡೆ ಅನುಭವಿಸಿದೆ.

ಒಂದೆಡೆ ಜೆಡಿಯು ಹಿನ್ನಡೆ ಸಾಧಿಸುತ್ತಿದ್ದರೆ, ವಿವಿಧ ಚುನಾವಣೆಗಳಲ್ಲಿ ಸತತ ಸೋಲನುಭವಿಸುತ್ತಿರುವ ಕಾಂಗ್ರೆಸ್​ ಈ ಬಾರಿ ಕೆಲವೊಂದು ಸ್ಥಾನಗಳ ಮುನ್ನಡೆ ಗಳಿಸಿಕೊಂಡಿದೆ. ಅದೇ ರೀತಿ ಮಹಾಘಟನಬಂಧನ್​​ನ ಭಾಗವಾಗಿರುವ ಎಡ ಪಕ್ಷಗಳು ಕೂಡ ಈ ಬಾರಿ ಕೆಲವೊಂದು ಸ್ಥಾನಗಳನ ಮುನ್ನಡೆ ಸಾಧಿಸಿದೆ. ಕೇವಲ 70 ಸ್ಥಾನಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್​ ಇತ್ತೀಚಿನ ಫಲಿತಾಂಶದ ಪ್ರಕಾರ ಉತ್ತಮ ಫಲಿತಾಂಶ ಪಡೆದಿದೆ ಎಂದೇ ಹೇಳಬಹುದು.

ಚುನಾವಣೋತ್ತರ ಎಲ್ಲ ಸಮೀಕ್ಷೆಗಳು ಮಹಾಘಟಬಂಧನ್ ಗೆಲುವಿನ ಬಗ್ಗೆ ಭರವಸೆ ನೀಡಿದ್ದು, ಅಂತಿಮ ಫಲಿತಾಂಶ ಹೊರ ಬಂದ ಬಳಿಕವಷ್ಟೇ ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಎಂದು ತಿಳಿದು ಬರಬೇಕಿದೆ.

ABOUT THE AUTHOR

...view details