ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ಶ್ರಮಿಸಬೇಕು ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಇದಾದ ಬಳಿಕ ಸಾರ್ಕ್ ದೇಶಗಳ ನಾಯಕರೊಂದಿಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ಕೂಡ ನಡೆಸಿದ್ದರು.
ಕೊರೊನಾ ವೈರಸ್ ಸೋಂಕು ನಿಯಂತ್ರಣ ನಿಧಿಗೆ ಈಗಾಗಲೇ ಭಾರತ 1 ಕೋಟಿ ರೂ ದೇಣಿಗೆ ನೀಡಿದ್ದು, ಇದರ ಬೆನ್ನಲ್ಲೇ ಭೂತಾನ್ ಪ್ರಧಾನಿ ಡಾ. ಲೋಟೆ ತ್ಯೆರಿಂಗ್ 75,62,260 ರೂ. ಹಾಗೂ ನೇಪಾಳ ಪ್ರಧಾನಿ ಕೆಪಿ ಶರ್ಮಾ 10 ಕೋಟಿ ರೂ ದೇಣಿಗೆ ನೀಡಿ ಘೋಷಣೆ ಮಾಡಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ಈ ಹಣ ಬಳಕೆಯಾಗಲಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಎರಡು ದೇಶದ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದು, ಮಹಾಮಾರಿ ವಿರುದ್ಧ ಹೋರಾಡಲು ನೀವೂ ನೀಡಿರುವ ಸಹಾಯ ನಿಜಕ್ಕೂ ಶ್ಲಾಘನಿಯ ಎಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಈ ವಿಡಿಯೋ ಕಾನ್ಪರೆನ್ಸ್ನಲ್ಲಿ ಮಾಲ್ಡಿವ್ ಅಧ್ಯಕ್ಷ ಇಬ್ರಾಹಿಂ ಸೊಲಿಹ್, ಶ್ರೀಲಂಕಾ ಪ್ರಧಾನಿ ಗೊಟಬಯ ರಾಜಪಕ್ಷೆ, ಭೂತಾನ್ ಪ್ರಧಾನಿ ಲೋಟೆ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ, ಆಫ್ಘಾನ್ ಹಾಗೂ ಪಾಕ್ ದೇಶದ ಪ್ರತಿನಿಧಿಗಳು ಸಹ ಭಾಗಿಯಾಗಿದ್ದರು.