ಕೋಲ್ಕತಾ:ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಮತ್ತು ಅಂಘಟಿತ ವರ್ಗಕ್ಕೆ 10 ಸಾವಿರ ರೂಪಾಯಿ ಸಹಾಯಧನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಪತ್ರಿಯೊಬ್ಬ ವಲಸೆ ಕಾರ್ಮಿಕರಿಗೆ 10 ಸಾವಿರ ರೂಪಾಯಿ ನೆರವು ನೀಡಿ: ಕೇಂದ್ರಕ್ಕೆ ದೀದಿ ಮನವಿ
ಸಾಂಕ್ರಾಮಿಕ ರೋಗದಿಂದಾಗಿ ಜನರು ಊಹಿಸಲಾಗದ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ವಲಸೆ ಕಾರ್ಮಿಕರಿಗೆ ತಲಾ 10 ಸಾವಿರ ರೂ. ನೀಡಬೇಕೆಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಮಮತಾ ಬ್ಯಾನರ್ಜಿ
ಕೇಂದ್ರ ಕ್ಯಾಬಿನೆಟ್ ಸಭೆಗೂ ಮೊದಲೇ ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ, 'ಅಸಂಘಟಿತ ವಲಯದ ಜನರು ಸೇರಿದಂತೆ ವಲಸೆ ಕಾರ್ಮಿಕರಿಗೆ ತಲಾ 10,000 ರೂ.ಗಳನ್ನು ಒಂದು ಬಾರಿ ಸಹಾಯಕ್ಕಾಗಿ ವರ್ಗಾಯಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇನೆ' ಎಂದಿದ್ದಾರೆ.
ಪಿಎಂ - ಕೇರ್ಸ್ ನಿಧಿಯ ಒಂದು ಭಾಗವನ್ನು ಇದಕ್ಕಾಗಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಜನರು ಊಹಿಸಲಾಗದ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Last Updated : Jun 3, 2020, 4:09 PM IST